ADVERTISEMENT

ಬಾಗಲಕೋಟೆ | ಕಾಳಜಿ ಕೇಂದ್ರ ಆರಂಭ: ಜನ, ಜಾನುವಾರು ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 12:45 IST
Last Updated 26 ಜುಲೈ 2024, 12:45 IST
   

ಬಾಗಲಕೋಟೆ: ಜಿಲ್ಲೆಯ ಎರಡು ಗ್ರಾಮಗಳ ಜನ, ಜಾನುವಾರುಗಳ ಸ್ಥಳಾಂತರವನ್ನು ಶುಕ್ರವಾರ ಆರಂಭಿಸಲಾಗಿದ್ದು, ನೀರು ಗ್ರಾಮದೊಳಕ್ಕೆ ನುಗ್ಗಲಾರಂಭಿಸಿದೆ.

ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದೆ. ಅಲ್ಲಿನ 17 ಕುಟುಂಬಗಳ 108 ಜನರು, ಜೊತೆಗೆ 86 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.

ಘಟಪ್ರಭಾ ನದಿ ನೀರು ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮದ 8 ಕುಟುಂಬಗಳ 32 ಜನರು, 8 ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನದಿ ನೀರಿನ ಹರಿವು ಹೆಚ್ಚುತ್ತಿರುವುದರಿಂದ ನದಿ ತೀರದ ಗ್ರಾಮಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗುತ್ತಿದೆ.

ADVERTISEMENT

ಮಿರ್ಜಿಯಲ್ಲಿನ ಕಾಳಜಿ ಕೇಂದ್ರದಲ್ಲಿ 32 ಜನರು ಉಳಿದುಕೊಂಡಿದ್ದರೆ, ಮುತ್ತೂರು ಕೇಂದ್ರದಲ್ಲಿ ಯಾರೂ ಉಳಿದುಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.