ADVERTISEMENT

ವಿಶ್ವದ ಸೃಷ್ಟಿಕರ್ತರು ವಿಶ್ವಕರ್ಮರು: ಶಾಸಕ ಸಿದ್ದು ಸವದಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 14:24 IST
Last Updated 17 ಸೆಪ್ಟೆಂಬರ್ 2023, 14:24 IST
<div class="paragraphs"><p>ರಬಕವಿ ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವದ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಶಾಸಕ ಸಿದ್ದು ಸವದಿ ಪೂಜೆ ನೆರವೇರಿಸಿದರು</p></div>

ರಬಕವಿ ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವದ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಶಾಸಕ ಸಿದ್ದು ಸವದಿ ಪೂಜೆ ನೆರವೇರಿಸಿದರು

   

ರಬಕವಿ ಬನಹಟ್ಟಿ: ‘ವಿಶ್ವಕರ್ಮರನ್ನು ದೇವರುಗಳ ಶಿಲ್ಪಿ ಎಂದು ಪರಿಗಣಿಸಲಾಗುತ್ತದೆ. ವಿಶ್ವಕರ್ಮರು ಜಗತ್ತಿನ ಎಲ್ಲ ದೇವತೆಗಳನ್ನು ಮತ್ತು ಜೀವಿಗಳನ್ನು ಸೃಷ್ಟಿ ಮಾಡಿರುವುದರಿಂದ ಅವರನ್ನು ವಿಶ್ವದ ಸೃಷ್ಟಿಕರ್ತರು ಎಂದು ಕರೆಯುತ್ತಾರೆ’ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

 ಇಲ್ಲಿನ ತಹಶೀಲ್ದಾರ್  ಕಾರ್ಯಾಲಯದಲ್ಲಿ ಭಾನುವಾರ ನಡೆದ ವಿಶ್ವಕರ್ಮರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ADVERTISEMENT

‘ಪ್ರಧಾನಿ ಮೋದಿ ವಿಶ್ವಕರ್ಮ ಯೋಜನೆ ಆರಂಭಿಸಿದ್ದು, ಶಿಲ್ಪಕಲೆಯಲ್ಲಿ ತೊಡಗಿದವರಿಗೆ ₹ 15 ಸಾವಿರ ಮೊತ್ತದ ಸಲಕರಣೆ ಕೊಡಲಿದ್ದಾರೆ. ಮೊದಲ ವರ್ಷದಲ್ಲಿ ₹1ಲಕ್ಷದವರೆಗೆ ಸಾಲ ಮತ್ತು ಸರಿಯಾಗಿ ಮರುಪಾವತಿ ಮಾಡಿದವರಿಗೆ ಎರಡನೆಯ ವರ್ಷದಲ್ಲಿ ₹ 2 ಲಕ್ಷ ಸಾಲವನ್ನು ನೀಡುವ ಯೋಜನೆಯನ್ನು ಅವರು  ಘೋಷಣೆ ಮಾಡಿದ್ದಾರೆ. ವಿಶ್ವಕರ್ಮರು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಬೇಕು’ ಎಂದರು.

ಶಿರಸ್ತೆದಾರ ಎಸ್.ಎಲ್.ಕಾಗಿಯವರ, ಮೌನೇಶ ಬಡಿಗೇರ, ಗಣಪತಿ ಬಡಿಗೇರ, ಕಲ್ಲಪ್ಪ ಪತ್ತಾರ, ಮೋಹನ ಪತ್ತಾರ,ಅರವಿಂದ ಪತ್ತಾರ, ಚಿದಾನಂದ ಪತ್ತಾರ, ರಮೇಶ ಬಡಿಗೇರ, ಕುಮಾರ ಪತ್ತಾರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.