ADVERTISEMENT

ನಾವು ಇಟ್ಟಂಗಿ ಕೊಟ್ಟು ದುಡ್ಡು ಕೇಳಿಲ್ಲ: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 14:21 IST
Last Updated 24 ಫೆಬ್ರುವರಿ 2024, 14:21 IST
 ಎಚ್.ಕೆ.ಪಾಟೀಲ
 ಎಚ್.ಕೆ.ಪಾಟೀಲ   

ಕೆರೂರ: ‘ನಾವು ದೇವರ ಹುಂಡಿಗೆ ಕೈ ಹಾಕಿಲ್ಲ. ದೇವಸ್ಥಾನದ ಹುಂಡಿಗೆ ಬಂದ ಹಣ ಸರ್ಕಾರದ ಯಾವುದೇ ಖಾತೆಗೆ ಹೋಗುವುದಿಲ್ಲ. ಟ್ರಸ್ಟ್‌ನ ಖಾತೆಗೆ ಹಣ ಹೋಗುತ್ತದೆ. ನಾವು ಇಟ್ಟಂಗಿ ಕೊಟ್ಟು ದುಡ್ಡು ಕೇಳುವರಲ್ಲ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಸಮೀಪದ ಹೂಲಗೇರಿ ಗ್ರಾಮಕ್ಕೆ ಶನಿವಾರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಲೋಕಾರ್ಪಣೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೀಘ್ರದಲ್ಲಿ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲಾಗುವುದು. ಐಹೊಳೆಯ ದುರಸ್ತಿಯಲ್ಲಿರುವ ಶಿಲ್ಪ ಕಲೆಗಳನ್ನು ಅಭಿವೃದ್ಧಿ ಹಾಗೂ ಅವುಗಳ ಸಂರಕ್ಷಣೆ ಮಾಡಲಾಗುವುದು. ಐಹೊಳೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತ್ರೀಸ್ಟಾರ್ ಹೋಟೆಲ್ ಪ್ರಾರಂಭಿಸಲಾಗುವುದು. ಐಹೊಳೆ ಜನರ ಸ್ಥಳಾಂತರಕ್ಕೆ ಸರ್ಕಾರ ಇಗಾಗಲೆ ಸ್ಥಳವನ್ನು ಗುರುತಿಸಲಾಗಿದೆ’ ಎಂದರು. 

‘ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿರುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಇವತ್ತು ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ದೂರಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.