ಬಾಗಲಕೋಟೆ: ಜಿಲ್ಲೆಯಲ್ಲಿ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದು, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಶೇ1.15 ರಿಂದ ಶೇ0.76ಕ್ಕೆ ಇಳಿಮುಖವಾದರೆ, ಗರ್ಭಿಣಿಯರಲ್ಲಿ ಶೇ0.06 ರಿಂದ ಶೇ0.05ಕ್ಕೆ ಇಳಿಮುಖವಾಗಿದೆ.
ಜಿಲ್ಲೆಯಲ್ಲಿ 17,342 ಎಚ್‌ಐವಿ/ಏಡ್ಸ್ ರೋಗಿಗಳು ಎ.ಆರ್.ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದ್ದರೂ, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.
ಸೋಂಕಿತರ ಪ್ರಮಾಣದಲ್ಲಿ ಅಕ್ಟೋಬರ್ ಅಂತ್ಯಕ್ಕೆ ಬಾಗಲಕೋಟೆ ತಾಲ್ಲೂಕಿನ ಸಾಮಾನ್ಯರಲ್ಲಿ ಶೇ0.84 ರಿಂದ 0.59ಕ್ಕೆ ಇಳಿಕೆಯಾದರೆ, ಗರ್ಭಿಣಿಯರಲ್ಲಿ ಶೇ0.7 ರಿಂದ 0.8ಕ್ಕೆ ಏರಿಕೆಯಾಗಿದೆ.
ಜಮಖಂಡಿ ಸಾಮಾನ್ಯರಲ್ಲಿ ಶೇ1.36 ರಿಂದ ಶೇ1.1ಕ್ಕೆ, ಗರ್ಭಿಣಿಯರಲ್ಲಿ ಶೇ0.06 ರಿಂದ ಶೇ0.3, ಮುಧೋಳ ಸಾಮಾನ್ಯರಲ್ಲಿ ಶೇ1.64 ರಿಂದ ಶೇ1.06ಕ್ಕೆ, ಗರ್ಭಿಣಿಯರಲ್ಲಿ ಶೇ0.12 ರಿಂದ ಶೇ.0.03ಕ್ಕೆ ಇಳಿಕೆಯಾಗಿದೆ.
ಬಾದಾಮಿ ಸಾಮಾನ್ಯರಲ್ಲಿ ಶೇ0.49 ರಿಂದ ಶೇ.064ಕ್ಕೆ, ಗರ್ಭಿಣಿಯರಲ್ಲಿ ಶೇ.0.03 ರಿಂದ ಶೇ.0.6ಕ್ಕೆ ಏರಿಕೆಯಾಗಿದೆ. ಹುನಗುಂದ ಸಾಮಾನ್ಯರಲ್ಲಿ ಶೇ0.43 ರಿಂದ ಶೇ0.38ಕ್ಕೆ ಇಳಿಕೆಯಾದರೆ, ಗರ್ಭಿಣಿಯರಲ್ಲಿ ಶೇ0.03 ರಿಂದ ಶೇ0.04ಕ್ಕೆ ಏರಿಯಾಗಿದೆ. ಬೀಳಗಿ ಸಾಮಾನ್ಯರಲ್ಲಿ ಶೇ1.04 ರಿಂದ ಶೇ0.83ಕ್ಕೆ ಇಳಿಕೆಯಾದರೆ, ಗರ್ಭಿಣಿಯರಲ್ಲಿ ಶೇ0.06 ರಿಂದ ಶೇ0.13ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12 ಎಚ್ಐವಿ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಿವೆ. 60 ಎಫ್ಐಸಿಟಿಸಿ ಕೇಂದ್ರಗಳ ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ 32 ಕೇಂದ್ರಗಳಿವೆ. ನಾಲ್ಕು ಎಆರ್‌ಟಿ ಕೇಂದ್ರಗಳು, ಜಿಲ್ಲೆಯಲ್ಲಿ ಮೂರು ಲೈಂಗಿಕ ರೋಗ ಪತ್ತೆ ಕೇಂದ್ರ (ಸುರಕ್ಷಾ ಕ್ಲಿನಿಕ್) ಗಳಿವೆ.
ಎಚ್‍ಐವಿ ನಿಯಂತ್ರಣಕ್ಕಾಗಿ ಕಾಲೇಜುಗಳಲ್ಲಿ, ಪ್ರೌಢಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾರಾಥಾನ್, ನಾಟಕ, ರೀಲ್ಸ್ ಸ್ಪರ್ಧೆ, ರಸಪ್ರಶ್ನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪಂಚಾಯಿತಿ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ, ಕೈಗಾರಿಕಾ ಕಾರ್ಮಿಕರಿಗೆ ಅರಿವು ಅರಿವು ಮೂಡಿಸಲಾಗಿದೆ. ಈ ವರ್ಷ ಎಚ್‍ಐವಿ ಸೋಂಕಿನ ತಡೆಗಾಗಿ ‘ಸಮುದಾಯಗಳು ಮುನ್ನಡೆಸಲಿ’ ಘೋಷಣೆಯಡಿ ಏಡ್ಸ್ ದಿನ ಆಚರಿಸಲಾಗುತ್ತಿದೆ.
ಕಾರ್ಯಕ್ರಮ
ಬಾಗಲಕೋಟೆ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿ.1 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ಪ್ರತಿಬಂಧ ಹಾಗೂ ನಿಯಂತ್ರಣ ಘಟಕ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ಕ್ಕೆ ಜಿಲ್ಲಾಡಳಿತ ಭವನದಿಂದ ಜಾಗೃತಿ ಜಾಥಾ ಪ್ರಾರಂಭವಾಗಿ ನವನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಮುಕ್ತಾಯಗೊಳ್ಳಲಿದೆ. ನಂತರ 11ಕ್ಕೆ ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.