ಹೊಸಪೇಟೆ: ಸೂಕ್ತ ಸಮಯದಲ್ಲಿ ಬಸ್ ಸೌಲಭ್ಯ ಇಲ್ಲದ ಕಾರಣ ಈ ವಿದ್ಯಾರ್ಥಿ ಗಳು ನಿತ್ಯ ಶಾಲೆಗೆ ನಡೆದುಕೊಂಡೇ ಹೋಗುವುದು ಅನಿವಾರ್ಯ. ಅದೂ ಮೂರ್ನಾಲ್ಕು ಕಿಲೋಮೀಟರ್ ದೂರ ‘ಪಾದಯಾತ್ರೆ’ಯೇ ಇವರಿಗೆ ಅನಿವಾರ್ಯವಾಗಿದೆ.
ತಾಲ್ಲೂಕಿನ ಕಮಲಾಪುರದ ಕುಪ್ಪಯ್ಯ ಕ್ಯಾಂಪ್ ಪ್ರದೇಶದಲ್ಲಿರುವ ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಬಾಲಕಿಯರ ಸರ್ಕಾರಿ ವಸತಿ ನಿಯ ಹಾಗೂ ಕಸ್ತೂರ ಬಾ ವಿದ್ಯಾ ರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿ ನಿಯರಿಗೆ ಸಮರ್ಪಕ ಬಸ್ ಸೌಲಭ್ಯ ಇಲ್ಲದಿರುವ ಕಾರಣ ನಿತ್ಯ 3 ಕಿ.ಮೀ ನಡೆದುಕೊಂಡೇ ಶಾಲೆಗೆ ಹೋಗಿ ಬರುತ್ತಿದ್ದಾರೆ.
ಹಾಗಂತ ಈ ಮಾರ್ಗದಲ್ಲಿ ಬಸ್ಸುಗಳೇ ಸಂಚರಿಸುವುದಿಲ್ಲ ಎಂದೇ ನಿಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗುವ ಎಲ್ಲ ಬಸ್ಸುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಶಾಲೆಯ ಸಮಯಕ್ಕೆ ಅನುಗುಣವಾಗಿ ಬಸ್ ಸೌಲಭ್ಯ ಇಲ್ಲ.
ಸರ್ಕಾರಿ ವಸತಿ ನಿಲಯಗಳಲ್ಲಿ ವಾಸವಾಗಿರುವ ಈ ಎಲ್ಲ ವಿದ್ಯಾರ್ಥಿನಿ ಯರಿಗೆ ಸರ್ಕಾರವೇ ಶುಲ್ಕ ಭರಿಸಿ ಬಸ್ ಪಾಸ್ ವಿತರಿಸಿದೆ. ಆದರೆ ಬಸ್ ಸೌಲಭ್ಯವೇ ಇರದ ಕಾರಣ ಅದು ಬಳಕೆಗೆ ಬರುತ್ತಿಲ್ಲ. ಶಾಲಾ ಅವಧಿ ಮುಗಿದ ನಂತರ ಮರಳಿ ವಸತಿ ನಿಲಯಕ್ಕೆ ಹೋಗುವಾಗಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ನಡೆದುಕೊಂಡು ಹೋಗ ಲಾರದೆ ಬಸ್ಸಿನಲ್ಲಿಯೇ ಹೋಗಬೇಕು ಎಂದರೆ ಗಂಟೆಗಟ್ಟಲೇ ಕಾಯುವುದು ಅನಿವಾರ್ಯ.
‘ಬೆಳಿಗ್ಗೆ 9.30 ಒಳಗಾಗಿ ಶಾಲೆಗೆ ಬರಬೇಕು. ಆದರೆ, ವಸತಿ ನಿಲಯದಲ್ಲಿ ಉಪಾಹಾರ ಸೇವಿಸಿ ಬಸ್ ನಿಲ್ದಾಣಕ್ಕೆ ಬಂದರೆ ಬಸ್ಸು ಬರುವುದಿಲ್ಲ. ವಿಶ್ವವಿದ್ಯಾಲಯದಿಂದ ಬರುವ ಬಸ್ ನಿಗದಿತ ಸಮಯದಲ್ಲಿ ಸಂಚರಿಸದೇ ಇರುವುದರಿಂದ ವಸತಿ ನಿಲಯದಿಂದ ಶಾಲೆವರೆಗೂ ನಡೆದುಕೊಂಡೇ ಹೋಗಬೇಕಾಗಿದೆ. ನಿತ್ಯ 6 ಕಿ.ಮೀ ನಡೆಯುವುದು ಅನಿವಾರ್ಯವಾಗಿದ್ದು, ಶನಿವಾರ ಬೇಗ ಶಾಲೆಗೆ ಹೋಗಬೇಕಾದರೆ ನಸುಕಿನಲ್ಲೇ ಹಾಸ್ಟೆಲ್ ಬಿಡಬೇಕು’ ಎನ್ನುತ್ತಾರೆ 9ನೇ ತರಗತಿ ವಿದ್ಯಾರ್ಥಿನಿ ರೇಣುಕಾ.
ಆದರೆ ವಿದ್ಯಾರ್ಥಿನಿಯರ ಆರೋಪವನ್ನು ತಳ್ಳಿ ಹಾಕುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ಘಟಕದ ವ್ಯವಸ್ಥಾಪಕ ಬಸವರಾಜಪ್ಪ, ‘ವಿಶ್ವವಿದ್ಯಾಲಯದಿಂದ ಸಮಯಕ್ಕೆ ಸರಿಯಾಗಿ ಬಸ್ ಸಂಚಾರದ ವ್ಯವಸ್ಥೆ ಇದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸು ತ್ತಾರೆ. ಒಂದು ವೇಳೆ ವಿದ್ಯಾರ್ಥಿನಿಯರಿಗೆ ಬಸ್ಸಿನ ಸಮಸ್ಯೆಯಾಗಿದ್ದರೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗುವುದು. ಇಲ್ಲದಿದ್ದರೆ ಇರುವ ಬಸ್ಸುಗಳನ್ನೇ ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
***
ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಆಗಿರುವ ಬಸ್ಸಿನ ಸಮಸ್ಯೆ ಬಗ್ಗೆ ತಿಳಿದಿಲ್ಲ. ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಿಸಲಾಗುವುದು.
-ಶರಣಪ್ಪ ವಟಗಲ್, ಶಿಕ್ಷಣ ಸಂಯೋಜನಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.