ADVERTISEMENT

ಮುಷ್ಟಿಧಾನ್ಯ ಸಂಗ್ರಹ ಅಭಿಯಾನಕ್ಕೆ ಚಾಲನೆ

ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 7:34 IST
Last Updated 22 ಮಾರ್ಚ್ 2018, 7:34 IST

ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಮುಷ್ಟಿಧಾನ್ಯ ಸಂಗ್ರಹ ಅಭಿಯಾನಕ್ಕೆ ಮುಖಂಡ ಸಣ್ಣ ಪಕ್ಕೀರಪ್ಪ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಫಕ್ಕೀರಪ್ಪ, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮುಷ್ಟಿಧಾನ್ಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬಳ್ಳಾರಿ ನಗರದ 240, ಸಿರುಗುಪ್ಪದ 211, ಹೊಸಪೇಟೆಯ 217, ಸಂಡೂರಿನ 230, ಹಗರಿಬೊಮ್ಮನಹಳ್ಳಿಯ 236, ಹಡಗಲಿಯ 200, ಕೂಡ್ಲಿಗಿಯ 229 ಹಾಗೂ ಕಂಪ್ಲಿಯ 222 ಬೂತ್‌ಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ರೈತರಿಂದ ಮುಷ್ಟಿಧಾನ್ಯ ಸಂಗ್ರಹಣೆ ಮಾಡಲಿದ್ದಾರೆ’ ಎಂದರು.

ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ರೈತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಕ್ರೋಢಿಕರಿಸಿದ ಮುಷ್ಟಿಧಾನ್ಯಗಳಿಂದ ಏಪ್ರಿಲ್ 8ರೊಳಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಂಗನಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಮುಖಂಡರಾದ ಮುರಹರಗೌಡ, ವಿ.ಸಂಜಯ ಬೆಟಗೇರಿ, ಗ್ರಾಮಸ್ಥರಾದ ತಿಮ್ಮನಗೌಡ, ಪಂಪನಗೌಡ, ದಾಸಪ್ಪ ಹಾಗೂ ಮರಿಬಸವನಗೌಡ ಇದ್ದರು.

ಸೋಮಶೇಖರ ರೆಡ್ಡಿ ಸಂಗ್ರಹ: ನಗರದ ಬಿಸಿಲಹಳ್ಳಿಯಲ್ಲಿ ಮುಷ್ಟಿಧಾನ್ಯ ಸಂಗ್ರಹಿಸುವ ಅಭಿಯಾನಕ್ಕೆ ಮುಖಂಡ ಜಿ.ಸೋಮಶೇಖರ ರೆಡ್ಡಿ ಬುಧವಾರ ಚಾಲನೆ ನೀಡಿದರು. ಬಳಿಕ ಗ್ರಾಮದ ಮಾರೆಮ್ಮ ದೇಗುಲದಲ್ಲಿ ವಿಶೇಷಪೂಜೆ ನೆರವೇರಿಸಿದರು.

ನಂತರ ಜನತಾ ಕಾಲೊನಿಗೆ ತೆರಳಿ ಪ್ರತಿ ಮನೆಗಳಿಂದ ಮುಷ್ಟಿಧಾನ್ಯ ಸಂಗ್ರಹಿಸಿದರು. ಅಭಿಯಾನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

ಪಾಲಿಕೆ ಸದಸ್ಯ ಎಸ್.ಮಲ್ಲನಗೌಡ, ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಕೆ.ಶಶಿಕಲ, ಮುಖಂಡರಾದ ಬಸವರಾಜ ಬಿಸಿಲಹಳ್ಳಿ, ಬಿ.ಕೆ.ಶ್ರೀನಿವಾಸ, ಬಿ.ಕೆ.ಬಸವರಾಜ, ಕೆ.ಬಸವ, ರಮೇಶ, ತಿಮ್ಮಪ್ಪ, ತಿಪ್ಪೇರುದ್ರ, ಸಣ್ಣರಾಮ, ಸೋಮಶೇಖರ, ಕಟ್ಟೆಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.