ಕುರುಗೋಡು: ಸಮೀಪದ ದರೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ತೋಳಗಳ ಗುಂಪು ನಡೆಸಿದ ದಾಳಿಯಲ್ಲಿ 12 ಕುರಿ ಮರಿಗಳು ಮೃತಪಟ್ಟಿವೆ.
ಬೆಳಗಾವಿ ಜಿಲ್ಲೆಯ ಯಮಗರಣಿ ಗ್ರಾಮದ ಸಿದ್ದಪ್ಪನಿಗೆ ಎಂಬುವರಿಗೆ ಸೇರಿದ 100ಕ್ಕೂ ಅಧಿಕ ಕುರಿ ಮರಿಗಳನ್ನು ಕುರುಗೋಡು ಹೊರ ವಲಯದ ಕುರಿಹಟ್ಟಿಯಲ್ಲಿ ಬಿಟ್ಟಿದ್ದರು.
ಕುರಿಗಾಹಿ ಸಿದ್ದಪ್ಪ ಪ್ರತಿಕ್ರಿಯಿಸಿ, ‘ಕುರಿ ಮರಿಗಳನ್ನು ಬೆಳೆಸಿ ಮಾರಾಟಮಾಡುವ ಕಾಯಕ ನಮ್ಮದು. ಮೂರು ತಿಂಗಳು ತುಂಬಿದ 100 ಕುರಿಮರಿಗಳಲ್ಲಿ 12 ಮರಿಗಳನ್ನು ತೋಳಗಳು ಸಾಯಿಸಿವೆ. ಇದರಿಂದ ₹65 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ’ ಎಂದರು.
ಪಶು ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.