ಬಳ್ಳಾರಿ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮೂಲಕ ಜಿಲ್ಲೆಯ ತೋರಣಗಲ್‌ನ ಜಿಂದಾಲ್ ಸಂಸ್ಥೆಗೆ 35 ಟನ್ ‘ನಂದಿನಿ’ ಮೈಸೂರು ಪಾಕ್ ಅನ್ನು ಪೂರೈಕೆ ಮಾಡಲಾಗಿದೆ.
‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟದ (ರಾಬಕೊವಿ) ಮಧ್ಯಸ್ಥಿಕೆಯಲ್ಲಿ ಈ ವ್ಯಾಪಾರ ನಡೆದಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪೀರ್ಯ ನಾಯಕ್ ಅವರು, ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರ್ಧ ಕೆ.ಜಿ ತೂಕದ ಒಟ್ಟು 70 ಸಾವಿರ ಪ್ಯಾಕೆಟ್‌ಗಳಲ್ಲಿ ಸಿಹಿ ಉತ್ಪನ್ನವನ್ನು ಪೂರೈಕೆ ಮಾಡಲಾಗಿದೆ. ಈ ವಹಿವಾಟಿನ ಒಟ್ಟು ಮೌಲ್ಯ ₹1.50 ಕೋಟಿಗೂ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಕೆಎಂಎಫ್‌ಗೆ ಸಿಕ್ಕ ಅತಿದೊಡ್ಡ ಆರ್ಡರ್‌ನಲ್ಲಿ ಇದು ಒಂದಾಗಿದೆ’ ಎಂದು ಮಾಹಿತಿ ನೀಡಿದರು.
‘ಅಲ್ಲದೆ, ಸುಖೋ ಬ್ಯಾಂಕ್‌ಗೂ 7 ಸಾವಿರ ಪೊಟ್ಟಣಗಳ ಸಿಹಿಯನ್ನು ಮಾರಾಟ ಮಾಡಲಾಗಿದೆ’ ಎಂದು ಹೇಳಿದರು.
ತಿರುಪತಿಯ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಕೆಯಾದ ವಿವಾದ ಬಹಿರಂಗವಾದ ಬೆನ್ನಲ್ಲೇ ‘ನಂದಿನಿ’ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ದೀಪಾವಳಿ ಹಬ್ಬಕ್ಕೆ ತನ್ನ ನೌಕರರಿಗೆ ಹಂಚಲು ಜಿಂದಾಲ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೈಸೂರ್ ಪಾಕ್ ಅನ್ನು ಖರೀದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.