ADVERTISEMENT

ಬಳ್ಳಾರಿ: ಆನ್‌ಲೈನ್‌ನಲ್ಲಿ ₹56.24 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:55 IST
Last Updated 9 ಅಕ್ಟೋಬರ್ 2024, 15:55 IST
<div class="paragraphs"><p>ವಂಚನೆ</p></div>

ವಂಚನೆ

   

ಬಳ್ಳಾರಿ: ಇಲ್ಲಿನ ಬಸವೇಶ್ವರ ನಗರದ ಮೆಡಿಕಲ್ ಸ್ಟೋರ್‌ವೊಂದರ ಮಾಲೀಕರಿಗೆ ಆನ್‌ಲೈನ್‌ನಲ್ಲಿ ₹56.24 ಲಕ್ಷ ವಂಚಿಸಲಾಗಿದೆ. ಈ ಕುರಿತು ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ವರ್ಕ್ ಫ್ರಮ್ ಹೋಂವೊಂದರ ಜಾಹೀರಾತು ವ್ಯಕ್ತಿಗೆ ಕಂಡಿತ್ತು. ಅದನ್ನು ಲೈಕ್ ಮಾಡಿದ್ದ ಅವರಿಗೆ ಟೆಲಿಗ್ರಾಂನಲ್ಲಿ ಮಾಯ ಎಂಬ ಹೆಸರಿನಿಂದ ಸಂದೇಶ ಬಂದಿತ್ತು. ‘ಬಾನ್ವಾಯ್ ಮ್ಯಾರಿಯೇಟ್ ಕಂಪನಿಯಲ್ಲಿ ಕೆಲಸ ಮಾಡಲು ನಿಮಗೆ ಇಷ್ಟವಿದೆಯೇ’ ಎಂದು ಅತ್ತಲಿಂದ ಸಂದೇಶ ಬಂದಿತ್ತು. ಕೆಲಸ ಮಾಡುವುದಾಗಿ ಹೇಳಿದಾಗ ರಾಜೇಶ್ ಕನನ್ ಎಂಬುವವರನ್ನು ವ್ಯಕ್ತಿಗೆ ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಡಲಾಗಿತ್ತು ಎನ್ನಲಾಗಿದೆ. 

ADVERTISEMENT

‘ಆನ್‌ಲೈನ್ ತರಬೇತಿ ನೀಡಿ ಬಳಿಕ ಕೆಲಸ ಕೊಡುವುದಾಗಿ ನಂಬಿಸಿ  ₹56,24,‌166 ಹಾಕಿಸಿಕೊಳ್ಳಲಾಯಿತು. ಬಳಿಕ ಇದು ಮೋಸದ ಜಾಲವೆಂದು ಅರ್ಥವಾಯಿತು’ ಎಂದು ವ್ಯಕ್ತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.