ADVERTISEMENT

ತೆಕ್ಕಲಕೋಟೆ | 63 ಕುರಿ ಸಾವು: ಕಲುಷಿತ ಆಹಾರ ಸೇವನೆ ಶಂಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:29 IST
Last Updated 22 ಮೇ 2024, 15:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತೆಕ್ಕಲಕೋಟೆ: ಸಮೀಪದ ಹೆರಕಲ್ಲು ಗ್ರಾಮದಲ್ಲಿ 60ಕ್ಕೂ ಹೆಚ್ಚು ಕುರಿಗಳು ಬುಧವಾರ ಸಾವಿಗೀಡಾಗಿದ್ದು, ಕಲುಷಿತ ಆಹಾರ ಸೇವನೆಯೇ ಘಟನೆ ಕಾರಣ ಎಂದು ಶಂಕಿಸಲಾಗಿದೆ.

ಗ್ರಾಮದ ಗುಮ್ಮಡಿ ರಾಜಶೇಖರ, ಗಾದಿಲಿಂಗ ಹಾಗೂ ಮಂಜಪ್ಪ ಅವರಿಗೆ ಸೇರಿದ ಕುರಿಮಂದೆ ಮಂಗಳವಾರದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಲಾಗಿತ್ತು.

ADVERTISEMENT

ಬಳ್ಳಾರಿ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ವಿನೋದ್ ಕುಮಾರ್, ಪ್ರಾದೇಶಿಕ ಪ್ರಯೋಗಾಲಯ ಸಂಶೋಧನಾಧಿಕಾರಿ ಡಾ. ರಾಜಶೇಖರ, ಸಿರುಗುಪ್ಪ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ವೈ ಗಂಗಾಧರ ಪರಿಶೀಲನೆ ನಡೆಸಿ ಔಷಧೋಪಚಾರ ನೀಡಿದ್ದರು.

‘ನಮ್ಮವು 250 ಕುರಿ ಇದ್ದಾವೆ. ಮಂಗಳವಾರದಿಂದ ಕುರಿಗಳು ತೀವ್ರ ಅಸ್ವಸ್ಥವಾಗಿದ್ದು ಸಂಜೆಯಿಂದ ಒಂದೊಂದಾಗಿ ಸಾವಿಗೀಡಾಗುತ್ತಿವೆ. ಈ ವರೆಗೆ 63 ಕುರಿಗಳು ಸತ್ತಿವೆ. ಔಷಧ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಕುರಿಗಾಹಿ ಗಾದಿಲಿಂಗ ಆತಂಕ ವ್ಯಕ್ತಪಡಿಸಿದರು.

‘ಕುರಿಗಳು ವಿಷ ಪೂರಿತ ಆಹಾರ ಸೇವನೆ ಮಾಡಿರುವ ಸಾಧ್ಯತೆ ಇದ್ದು, ಚಿಕಿತ್ಸೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಕುರಿ ಅಭಿವೃದ್ಧಿ ಮಂಡಳಿಗೆ ಪರಿಹಾರಕ್ಕಾಗಿ ಶಿಫಾರಸ್ಸು ಮಾಡಲಾಗಿದೆ’ ಎಂದು ಡಾ.ವಿನೋದ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.