ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿನ ನೂತನ ಕ್ಲಾಕ್ ಟವರ್ ಸುತ್ತಲಿನ ಕಟ್ಟಿಗೆಗಳನ್ನು ತೆರವುಗೊಳಿಸುವ ವೇಳೆ ಕಾರ್ಮಿಕನೊಬ್ಬ ಮೇಲಿಂದ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಸೋಮವಾರ ನಡೆದ ಈ ಘಟನೆಯಲ್ಲಿ ಬಾಪುಜಿ ನಗರದ ನಿವಾಸಿ ವಿರೇಶ್ ಎಂಬುವವರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಟ್ರಾಮ್ ಕೇರ್ ಸೆಂಟರ್ಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಯಾವುದೆ ಪ್ರಕರಣ ದಾಖಲಾಗಿಲ್ಲ ಎಂದು ಗಾಂಧಿನಗರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.