ADVERTISEMENT

ಬಳ್ಳಾರಿ | ಮತ್ತೊಬ್ಬ ಬಾಣಂತಿ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 14:13 IST
Last Updated 14 ನವೆಂಬರ್ 2024, 14:13 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬಳ್ಳಾರಿ: ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಸಿಸೇರಿಯನ್‌ಗೆ ಒಳಗಾದ ಬಳಿಕ ಏಕಾಏಕಿ ತೀವ್ರ ಅಸ್ವಸ್ಥಗೊಂಡಿದ್ದ ಐವರ ಪೈಕಿ ರೋಜಾ (19) ಎಂಬುವವರು ಗುರುವಾರ ಬಳ್ಳಾರಿ  ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸ್‌) ಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಈ ಮೂಲಕ ಜಿಲ್ಲಾಸ್ಪತ್ರೆಯಲ್ಲಾದ ಅವಘಡಕ್ಕೆ ಪ್ರಾಣ ತೆತ್ತವರ ಸಂಖ್ಯೆ ಮೂರಕ್ಕೆ ಏರಿದೆ.  

ADVERTISEMENT

ರೋಜಾ ಅವರು ಕುರುಗೋಡು ಸಮೀಪದ ಎಮ್ಮಿಗನೂರಿನವರು ಎಂದು ಹೇಳಲಾಗಿದೆ. ಸುಮಯ್ಯ ಎಂಬುವವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಇನ್ನು ಮೂವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವಿಮ್ಸ್‌ ಮೂಲಗಳು ಮಾಹಿತಿ ನೀಡಿವೆ.  ಇದಕ್ಕೂ ಹಿಂದೆ ನಂದಿನಿ ಮತ್ತು ಲಲಿತಮ್ಮ ಎಂಬುವವರು ಕೊನೆಯುಸಿರೆಳೆದಿದ್ದರು. 

ಹೆರಿಗೆಗೆಂದು ಇತ್ತೀಚೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಹಲವು ಗರ್ಭಿಣಿಯರಿಗೆ ಸಿಸೇರಿಯನ್‌ ಮಾಡಲಾಗಿತ್ತು. ಈ ಪೈಕಿ ಇಬ್ಬರು ಮಂಗಳವಾರ ಮೃಪಟ್ಟಿದ್ದರು. ಅವರಿಗೆ ಎಚ್‌ಸಿವಿ–ಹೆಪಟೈಟಿಸ್‌ ‘ಸಿ’, ‘ರೀನಲ್‌ ಸೆಪ್ಟಿಕ್‌ ಫೇಲ್ಯೂರ್‌’  (ಮೂತ್ರಪಿಂಡ ವೈಫಲ್ಯ) ಸೇರಿದಂತೆ ಬಹು ಅಂಗಾಂಗ ವೈಫಲ್ಯ ಸಮಸ್ಯೆ ಎದುರಾಗಿತ್ತು. ಇದೇ ಸಮಸ್ಯೆ ಇದ್ದ ಐವರನ್ನು ಜಿಲ್ಲಾಸ್ಪತ್ರೆಯಿಂದ ವಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಹೀಗಿರುವಾಗಲೇ ರೋಜಾ ಎಂಬುವವರು ಮೃತಪಟ್ಟಿದ್ದಾರೆ. 

ಜಿಲ್ಲಾಸ್ಪತ್ರೆಯಲ್ಲಿ ಇಂಥ ಅವಘಡಗಳು ಆಗದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರನ್ನು ಸಂಪರ್ಕ ಮಾಡಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.