ADVERTISEMENT

ಬಳ್ಳಾರಿಯನ್ನು ಭಯಮುಕ್ತ ಮಾಡಿದ್ದು ನಾನು: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 23:35 IST
Last Updated 9 ನವೆಂಬರ್ 2024, 23:35 IST
ಸಂಡೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯೊಂದರಲ್ಲಿ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರಿ ಉಡುಗೊರೆ ನೀಡಿದರು. 
ಸಂಡೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯೊಂದರಲ್ಲಿ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರಿ ಉಡುಗೊರೆ ನೀಡಿದರು.    

ಬಳ್ಳಾರಿ: ‘ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ. ಜೈಲಿಗೆ ಹೋಗಿ ಬಂದ ನಿಮ್ಮ ಅಟ್ಟಹಾಸ ಮುರಿದಿದ್ದು ಮತ್ತು ಬಳ್ಳಾರಿ ಜನರನ್ನು ಭಯಮುಕ್ತ ಗೊಳಿಸಿದ್ದು ಇದೇ ಸಿದ್ದರಾಮಯ್ಯ ಎಂಬುದನ್ನು ಮರೆಯಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಂಡೂರಿನ ವಿಠಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ಪ್ರಚಾರ ಮಾಡಿದ ಅವರು, ‘ರೆಡ್ಡಿಯವರೇ, ಕರ್ನಾಟಕ ರಾಜಕಾರಣಕ್ಕೆ ನನ್ನ ಮತ್ತು ನಿಮ್ಮ ಕೊಡುಗೆ ಏನು? ನೀವೇನು ಬಳ್ಳಾರಿ ಯಜಮಾನರಾ’ ಎಂದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಗಂಗಾವತಿಗೆ ಪ್ರಚಾರಕ್ಕೆ ಹೋಗಲು ಆಗಲಿಲ್ಲ. ನಮ್ಮ ಅಭ್ಯರ್ಥಿಯೂ ಸರಿಯಾದ ಪ್ರಚಾರ ಮಾಡಲಿಲ್ಲ. ಹೀಗಾಗಿ ನೀವು ಗೆಲ್ಲುವಂತಾಯಿತು. ನಿಮ್ಮ ಈ ಗೆಲುವು ಶಾಶ್ವತ ಅಲ್ಲ. ಯಾರ ಗೆಲುವೂ ಶಾಶ್ವತ ಅಲ್ಲ. ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಯೋಗ್ಯತೆ ನಿಮಗಿಲ್ಲ’ ಎಂದರು.

ADVERTISEMENT

ಆರ್‌ಎಸ್‌ಎಸ್‌ ವಿರುದ್ಧ ಆಕ್ರೋಶ: ‘ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಗೋಡ್ಸೆ, ಸಾವರ್ಕರ್, ಗೋಳ್ವಾಲ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೈಲಿಗೆ ಹೋಗಿದ್ದಾರಾ? ಬಿಜೆಪಿ, ಆರ್‌ಎಸ್‌ಎಸ್‌ ಪರಿವಾರದ ಯಾರೊಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇಲ್ಲ’ ಎಂದರು.

ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎನ್ನುವ ಯಡಿಯೂರಪ್ಪ ತಾವು ಪೋಕ್ಸೊ ಪ್ರಕರಣದ ಆರೋಪಿ ಎಂಬುದನ್ನು ಮರೆತಂತಿದೆ. ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಬದಲಿಗೆ ಗಟ್ಟಿಗೊಳಿಸುತ್ತೇವೆ.
ಎಚ್‌.ಕೆ ಪಾಟೀಲ ಕಾನೂನು ಸಚಿವ
ಸಿದ್ದರಾಮಯ್ಯ ನನ್ನ ವಿರುದ್ಧ ಬೈದಾಡಿಕೊಂಡು ಹೋದಲ್ಲಿ ಮತ್ತು ಬಂದಲ್ಲಿ ನನ್ನ ಜಪ ಮಾಡುತ್ತಾರೆ. ನಾನು 14 ವರ್ಷ ಹೊರಗಡೆ ಇದ್ದೆ. ಬಳ್ಳಾರಿಯಲ್ಲಿ ನಿರುದ್ಯೋಗ ನೀಗಿಸದಿದ್ದರೆ ರಾಜಕೀಯ ಬಿಡುವೆ.
ಜನಾರ್ದನ ರೆಡ್ಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.