ADVERTISEMENT

ತೆಕ್ಕಲಕೋಟೆ: 6 ಮನೆ ಚಾವಣಿ ಕುಸಿತ, 2 ಜಾನುವಾರು ಸಾವು

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 13:21 IST
Last Updated 13 ಜೂನ್ 2024, 13:21 IST
ತೆಕ್ಕಲಕೋಟೆ ಸಮೀಪದ ಕೊಂಚಗೇರಿ ಗ್ರಾಮದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದಿದೆ
ತೆಕ್ಕಲಕೋಟೆ ಸಮೀಪದ ಕೊಂಚಗೇರಿ ಗ್ರಾಮದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದಿದೆ   

ತೆಕ್ಕಲಕೋಟೆ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಾನುವಾರುಗಳಿಗೆ ಜೀವಹಾನಿಯಾಗಿದೆ. ಅಲ್ಲಲ್ಲಿ ಮನೆಗಳು ಬಿದ್ದಿರುವ ವರದಿಯಾಗಿದೆ.

ಹಾಗಲೂರು ಗ್ರಾಮದಲ್ಲಿ ತುಂಡರಿಸಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಗಂಗಮ್ಮ ಮಲ್ಪಸ್ವ ಇವರಿಗೆ ಸೇರಿದ ₹35000 ಬೆಲೆಯ ಎಮ್ಮೆ, ಬಡೇಬಿ ಜಮೀರ್ ಬಾಷ ಇವರಿಗೆ ಸೇರಿದ ₹20000 ಮೌಲ್ಯದ ಆಕಳು ಮೃತಪಟ್ಟಿವೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

6 ಮನೆಗಳ ಚಾವಣಿ ಕುಸಿತ: ಹೋಬಳಿ ವ್ಯಾಪ್ತಿಯ ಉತ್ತನೂರು ಗ್ರಾಮದ ಚೆನ್ನಮ್ಮ ಜಿ ವೀರೇಶ್ ಗೌಡ, ತೆಕ್ಕಲಕೋಟೆ ಪಟ್ಟಣದ 9ನೇ ವಾರ್ಡ್ ನಿವಾಸಿ ನೀಲಮ್ಮ ದಟ್ಟಿ ಮಲ್ಲಪ್ಪ, ನಡವಿ ಗ್ರಾಮದ ಕುರಗೇರಿ ಈರಮ್ಮ, ಬಲಕುಂದಿ ಗ್ರಾಮದ ಐದಪ್ಪ ಇವರ ಮನೆಯ ಚಾವಣಿ ಕುಸಿದಿದೆ. ಅಲ್ಲದೆ ಕೊಂಚಗೇರಿ ಗ್ರಾಮದ ಜಯಮ್ಮ ಹಾಗೂ ಭೈರಾಪುರ ಗ್ರಾಮದ ಪಂಪನಗೌಡ ಇವರ ಮನೆಯ ಗೋಡೆ ಕುಸಿದಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ADVERTISEMENT
ತೆಕ್ಕಲಕೋಟೆ ಪಟ್ಟಣದಲ್ಲಿ ಬುಧವಾರ ಸುರಿದ ಮಳೆಗೆ ಮನೆಯ ಚಾವಣಿ ಕುಸಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.