ADVERTISEMENT

ಹಗರಿಬೊಮ್ಮನಹಳ್ಳಿಯಲ್ಲಿ ಕರಡಿ ಪ್ರತ್ಯಕ್ಷ, ಭಯಭೀತರಾದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:56 IST
Last Updated 15 ಮಾರ್ಚ್ 2024, 15:56 IST
<div class="paragraphs"><p>ಕುಂಚಿಟಿಗ ಮಠದ ಆವರಣದಲ್ಲಿ  ಕರಡಿ</p></div>

ಕುಂಚಿಟಿಗ ಮಠದ ಆವರಣದಲ್ಲಿ ಕರಡಿ

   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹೊಸ ಆನಂದೇವನಹಳ್ಳಿ ಡಾಬಾದ ಬಳಿ ಶುಕ್ರವಾರ ಕರಡಿಯೊಂದು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು.

ಗ್ರಾಮದ ಹೊರಗೆ ಜಮೀನು ಒಂದರಲ್ಲಿ ಕೊಳಬೆ ಬಾವಿಯ ನೀರು ಕುಡಿಯಲು ಆಗಾಗ್ಗೆ ಬರುತ್ತಿತ್ತು, ಆದರೆ ಇಂದು ಏಕಾಏಕಿ ನೋಡಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಅದನ್ನು ಆನೆಕಲ್ಲು ಅರಣ್ಯ ಪ್ರದೇಶದಲ್ಲಿರುವ ಗುಡ್ಡತಿಮ್ಮಪ್ಪನ ದೇವಸ್ಥಾನದ ಬಳಿಗೆ ಓಡಿಸಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಕರಿಬಸಪ್ಪ ತಿಳಿಸಿದರು.

ADVERTISEMENT

ಈಚೆಗೆ ಪಟ್ಟಣದ ಸುತ್ತಮುತ್ತಲೂ ಕರಡಿಗಳು ಪ್ರತ್ಯಕ್ಷವಾಗುತ್ತಿವೆ. ಅರಣ್ಯ ಪ್ರದೇಶದಲ್ಲಿ ಕುಡಿಯಲು ನೀರು ಇಲ್ಲದಿರುವುದರಿಂದ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.