ADVERTISEMENT

ಬಳ್ಳಾರಿ | ಮೆಟ್ರಿ ಗ್ರಾಮದಲ್ಲಿ ಪಿಕೆಪಿಎಸ್ ಆರಂಭಕ್ಕೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 5:06 IST
Last Updated 19 ಆಗಸ್ಟ್ 2023, 5:06 IST

ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆರಂಭಿಸಲು ದೇವಲಾಪುರ ಗ್ರಾಮದ ಸಹಕಾರಿ ಸಂಘದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯ ಅಂಗೀಕರಿಸಿದರು.

ಸಂಘದ ಉಳಿತಾಯದ ಲಾಭಾಂಶದಲ್ಲಿ ಹೊಸ ಸಹಕಾರ ಸಂಘ ಸ್ಥಾಪನೆಗೆ ಆರ್ಥಿಕ ನೆರವು ಒದಗಿಸಲು ತೀರ್ಮಾನಿಸಲಾಯಿತು.

ಬಳಿಕ ಸಂಘದ ಮುಖ್ಯ ಕಾರ್ಯನಿರ್ವಾಹಕ ಎನ್.ಬಾಲಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಮೆಟ್ರಿಯಲ್ಲಿ ಸಂಘ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗಿದೆ. ಸಂಘದಲ್ಲಿ 3,366 ಸದಸ್ಯರಿದ್ದು, ₹ 1,01,03,442 ಷೇರು ಬಂಡವಾಳ ಹೊಂದಿದೆ. ₹ 47.07ಲಕ್ಷ ಠೇವಣಿ ಇದ್ದು, ₹ 9.25 ಲಕ್ಷ ಕೃಷಿಯೇತರ ಸಾಲ, 715 ಸದಸ್ಯರಿಗೆ ಕೆಸಿಸಿ ಸಾಲ ₹ 5,46,45,000, ₹ 58.50 ಲಕ್ಷ ಮಧ್ಯಮಾವಧಿ ಸಾಲ, ₹ 19.20ಲಕ್ಷ ಎಸ್‍ಎಚ್‍ಜಿ ಸಾಲ ಸೇರಿ ₹ 6,24,15,006 ಸಾಲ ವಿತರಿಸಿದೆ. ₹ 1,47,88,000 ರಸಗೊಬ್ಬರ ಮಾರಾಟ ಮಾಡಿದ್ದು, ₹ 15.21ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ವಿವರಿಸಿದರು.

ADVERTISEMENT

ಅಧ್ಯಕ್ಷ ಗೊಲ್ಲರ ಜಂಬಯ್ಯ, ಉಪಾಧ್ಯಕ್ಷ ಗೌಡ್ರು ನಾಗರಾಜ, ನಿರ್ದೇಶಕರಾದ ಕುರಿ ಕರಿಬಸಪ್ಪ, ಕುರುಬರ ಅಂಜಿನಪ್ಪ, ದೇವರಮನೆ ಯಲ್ಲಪ್ಪ, ವಡ್ಡರ ಜಡೆಪ್ಪ, ಪಿ. ಶಿವರಾಮ, ಸಂಗಟಿ ಮಾರೇಶ, ಎಸ್.ಕೆ. ಬಸವರಾಜ, ಗೌಡ್ರು ಅಂಬಮ್ಮ, ಕುಂಬಾರ ಈರಮ್ಮ, ತಳವಾರ ವೀರೇಶ, ಪಿ. ಶೇಖಅಹ್ಮದ್, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.