ADVERTISEMENT

ಕಂಪ್ಲಿ: ಜೂನ್ 24ರಂದು ‘ಭವಾನಿ ಶ್ರೀ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:42 IST
Last Updated 22 ಜೂನ್ 2024, 15:42 IST

ಕಂಪ್ಲಿ: ‘ಇಲ್ಲಿಯ ಶ್ರೀ ತುಳಜಾ ಭವಾನಿ ಸೇವಾ ಟ್ರಸ್ಟ್ ಹಾಗೂ ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಆಳಂದ ರಾನಪ್ಪ ಸಂಗೋಳಗಿ ಸ್ಮರಣಾರ್ಥ ವಿವಿಧ ಕ್ಷೇತ್ರಗಳ ಸಾಧಕರಿಗೆ ಜೂನ್ 24ರಂದು ‘ಭವಾನಿ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಟ್ರಸ್ಟ್ ಸಲಹಾ ಸಮಿತಿ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಹೇಳಿದರು.

‘ತೋರಣಗಲ್ ಡಿ.ವೈ.ಎಸ್.ಪಿ ಪ್ರಸಾದ ಗೋಖಲೆ, ಕಲಬುರಗಿಯ ಬರಹಗಾರ ಶಿವರಂಜನ ಸತ್ಯಂಪೇಟೆ ಮತ್ತು ವಾಸ್ತುತಜ್ಞ ರಾಮಚಂದ್ರಾಚಾರ್ ಅವರಿಗೆ ಪ್ರಸ್ತುತ ಪ್ರಶಸ್ತಿ ನೀಡಿ ಗೌರವಿಸಲಾಗುವುದು’ ಎಂದು ಶನಿವಾರ ಪಟ್ಟಣದ ಹಕ್ಕಿಪಿಕ್ಕಿ ಹರಿಣಿ ಶಿಕಾರಿ ಕಾಲೊನಿಯ ತುಳುಜಾ ಭವಾನಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಅರಬ್ ರಾಷ್ಟ್ರದ ತುರ್ಕಮೇನಿಸ್ತಾನದಲ್ಲಿ 2023-24ನೇ ಸಾಲಿನ ಅಂತರರಾಷ್ಟ್ರೀಯ ಮಹಿಳಾ ಕುರಾಸ್(ಕುಸ್ತಿ) ಕ್ರೀಡಾ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿದ ಮಹಿಳಾ ಕುಸ್ತಿಪಟು, ವಿಜಯಪುರದ ಅಶ್ವಿನಿ ಕಾಳೆ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಜಿ. ಚಿತ್ರಗಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸಿಸಿಬಿ ಪೊಲೀಸ್ ಇನ್‌ಸ್ಟೆಕ್ಟರ್ ಬಿ.ಎಸ್. ಸುಧಾಕರ ಅಧ್ಯಕ್ಷತೆ ವಹಿಸಲಿದ್ದು, ಹೆಬ್ಬಾಳು ನಾಗಭೂಷಣ ಶಿವಾಚಾರ್ಯರು, ಶಾಸಕ ಜೆ.ಎನ್. ಗಣೇಶ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ತುಳುಜಾ ಭವಾನಿ 12ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದರು.

ಟ್ರಸ್ಟ್ ಸದಸ್ಯ ಬಿ. ನಾರಾಯಣಪ್ಪ, ಹಕ್ಕಿಪಿಕ್ಕಿ ಸಮುದಾಯದ ಮುಖಂಡರಾದ ಎಚ್.ಪಿ. ಶಿಕಾರಿ ರಾಮು, ಎಚ್.ಪಿ. ಶ್ರೀಕಾಂತ್, ಜಾನಕಿ. ಶಾಂತಮ್ಮ, ಚಂದ್ರಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.