ADVERTISEMENT

ಕಂಪ್ಲಿ: ಸಾಧಕರಿಗೆ ‘ಭವಾನಿಶ್ರೀ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:27 IST
Last Updated 25 ಜೂನ್ 2024, 15:27 IST
ಕಂಪ್ಲಿಯ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಭವಾನಿಶ್ರೀ’ ಪ್ರಶಸ್ತಿ ಪದಾನ ಮಾಡಿ ಗೌರವಿಸಲಾಯಿತು
ಕಂಪ್ಲಿಯ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಭವಾನಿಶ್ರೀ’ ಪ್ರಶಸ್ತಿ ಪದಾನ ಮಾಡಿ ಗೌರವಿಸಲಾಯಿತು   

ಕಂಪ್ಲಿ: ಇಲ್ಲಿಯ ಶ್ರೀ ತುಳಜಾ ಭವಾನಿ ಸೇವಾ ಟ್ರಸ್ಟ್, ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಆಳಂದ ರಾನಪ್ಪ ಸಂಗೋಳಗಿ ಸ್ಮರಣಾರ್ಥ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಭವಾನಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಳ್ಳಾರಿ ಸನ್ಮಾರ್ಗ ಗೆಳಯರ ಬಳಗ ಸಂಸ್ಥಾಪಕರು, ತೋರಣಗಲ್ ಡಿ.ವೈ.ಎಸ್.ಪಿ ಪ್ರಸಾದ ಗೋಖಲೆ, ಕಲಬುರಗಿ ಸಾಹಿತಿ ಶಿವರಂಜನ ಸತ್ಯಂಪೇಟೆ ಮತ್ತು ವಾಸ್ತುತಜ್ಞ ರಾಮಚಂದ್ರಾಚಾರ್ ಅವರಿಗೆ ಪ್ರಸ್ತುತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರಬ್ ರಾಷ್ಟ್ರದ ತುರ್ಕಮೇನಿಸ್ತಾನದಲ್ಲಿ 2023-24ನೇ ಸಾಲಿನ ಅಂತರರಾಷ್ಟ್ರೀಯ ಮಹಿಳಾ ಕುರಾಸ್(ಕುಸ್ತಿ) ಕ್ರೀಡಾ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿದ ಮಹಿಳಾ ಕುಸ್ತಿಪಟು ವಿಜಯಪುರದ ಕುಮಾರಿ ಅಶ್ವಿನಿ ಕಾಳೆ, ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಜಿ. ಚಿತ್ರಗಾರ, ಕಲಬುರಗಿ ವಿವಿಯ ಸಿಂಡಿಕೇಟ್ ಸದಸ್ಯ ರಾಘವೇಂದ್ರ ರಾವ್ ಎಂ. ಭೈರಪ್ಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ADVERTISEMENT

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಶಾಸಕ ಜೆ.ಎನ್. ಗಣೇಶ್ ಚಾಲನೆ ನೀಡಿ, ಅಲೆಮಾರಿ ಬುಡ್ಡಕಟ್ಟು ಸಮುದಾಯದ ಹಕ್ಕಿಪಿಕ್ಕಿ ಜನಾಂಗದವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಎಸ್. ಸುಧಾಕರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಮುದಾಯದವರಿಗೆ ತಿಳಿಸಿದರು.

ಟ್ರಸ್ಟ್ ಪದಾಧಿಕಾರಿಗಳಾದ ಪಿ. ಮೂಕಯ್ಯಸ್ವಾಮಿ, ಬಿ. ನಾರಾಯಣಪ್ಪ, ಪ್ರಮುಖರಾದ ಅರವಿ ಬಸವನಗೌಡ, ಆದಿತ್ಯ ಚಿಕ್ಕಣ್ಣ, ವಸುಧಾ, ಅಯ್ಯೋದಿ ವೆಂಕಟೇಶ, ಶಾಂತಿಲಾಲ್ ಸಿಂಘ್ವಿ, ಭಟ್ಟ ಪ್ರಸಾದ್, ಗುಡುದಮ್ಮ ಶ್ರೀನಿವಾಸ, ಟಿ.ವಿ. ಸುದರ್ಶನರೆಡ್ಡಿ, ಎನ್. ರಾಮಾಂಜನೇಯುಲು, ವಿ. ವಿದ್ಯಾಧರ, ಎಂ.ಸಿ. ಮಾಯಾಪ್ಪ, ಸಿದ್ದಪ್ಪ ಹರಿಣಿ ಶಿಕಾರಿ, ಹಕ್ಕಿಪಿಕ್ಕಿ ಸಮುದಾಯದ ಪ್ರಮುಖರಾದ ಎಚ್.ಪಿ. ಶಿಕಾರಿರಾಮು, ಎಚ್.ಪಿ. ಶ್ರೀಕಾಂತ್, ಸಣ್ಣ ಮಾರೆಪ್ಪ, ಜಾನಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.