ಕಂಪ್ಲಿ: ‘ಹೆಚ್ಚುತ್ತಿರುವ ನಗರೀಕರಣದಿಂದ ಅನೇಕ ಅಪರೂಪದ ಪಕ್ಷಿ ಸಂಕುಲಗಳು ಕಣ್ಮೆರೆಯಾಗುತ್ತಿದ್ದರೆ ಮತ್ತೊಂದೆಡೆ ಕೆಲ ಪಕ್ಷಿಗಳು ಈಗಾಗಲೇ ಅಳಿವಂಚಿನಲ್ಲಿದ್ದು, ಇವುಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ’ ಎಂದು ಇಲ್ಲಿಯ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಡಾ.ಬಿ. ಸುನೀಲ್ ತಿಳಿಸಿದರು.
ಸ್ಥಳೀಯ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಕ್ಷಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಅಕ್ಕಿ ಜಿಲಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಒದಗಿಸುತ್ತಿರುವ ಪ್ರಾಣಿ ಪಕ್ಷಿಪ್ರಿಯರಾದ ಪಟ್ಟಣದ ಪಿ. ಜಯಪ್ರಕಾಶಚೌದ್ರಿ ಮತ್ತು ಮಾಧವರೆಡ್ಡಿ ಅವರನ್ನು ಗೌರವಿಸಲಾಯಿತು.
ಉಪ ಪ್ರಾಚಾರ್ಯೆ ಸುಜಾತಾ, ಇಸಿಒ ಟಿ.ಎಂ. ಬಸವರಾಜ, ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್‍ಸಾಬ್, ಪದಾಧಿಕಾರಿಗಳಾದ ಮಾಳ್ಗಿ ಸಂತೋಷ, ಯಲ್ಲಪ್ಪ, ಸುಬಾನ್, ಅಕ್ಬರ್, ಪವನ್, ಉಮರ್, ಫಾರೂಕ್, ತಬ್ರೇಜ್, ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.