ADVERTISEMENT

ಸಂಡೂರು | ಕಾರ್ಯದರ್ಶಿ ಹುದ್ದೆಗೆ ದಿವಾಕರ್‌; ಬಂಡಾಯ ಶಮನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:24 IST
Last Updated 23 ಅಕ್ಟೋಬರ್ 2024, 0:24 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದ ದಿವಾಕರ್‌ ಅವರಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡಿ, ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. 

ADVERTISEMENT

‘ದಿವಾಕರ್‌ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದಲ್ಲೇ ಉಳಿಯುತ್ತಾರೆ’ ಎಂದು ಬಳ್ಳಾರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಘೋಷಿಸಿದರು.

ಖಳನಿಗೆ ಹೋಲಿಕೆ: ‘ಬಾಹುಬಲಿ’ ಸಿನಿಮಾದಲ್ಲಿ ರಾಜನನ್ನಾಗಿ ಒಬ್ಬನನ್ನು, ಸೇನಾಧಿಪತಿಯಾಗಿ ಪ್ರಭಾಸ್‌ಗೆ ಘೋಷಣೆ ಮಾಡಲಾಗುತ್ತದೆ. ರಾಜನನ್ನಾಗಿ ಘೋಷಣೆ ಮಾಡಿದವರ ಬಗ್ಗೆ ಸ್ಪಂದನೆಯೇ ಬರುವುದಿಲ್ಲ. ಪ್ರಭಾಸ್‌ ಸೇನಾಧಿಪತಿ ಎಂದು ಘೋಷಣೆಯಾದ ತಕ್ಷಣ ಸ್ಪಂದನೆ ಸಿಗುತ್ತದೆ. ಅದೇ ಪರಿಸ್ಥಿತಿ ದಿವಾಕರ್‌ಗೆ ಬಂದಿದೆ’ ಎಂದ ಜನಾರ್ದನ ರೆಡ್ಡಿ ತಿಳಿಸಿದರು.

‘ಯಡಿಯೂರಪ್ಪ ಸೈಕಲ್‌, ಬಸ್‌ನಲ್ಲಿ ತಿರುಗಿ ಪಕ್ಷ ಸಂಘಟಿಸಿ 66ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆದರು. ನನಗೆ ಈಗಿನ್ನೂ 57 ವರ್ಷ ವಯಸ್ಸು. ಆ ಲೆಕ್ಕದಲ್ಲಿ ನನಗೆ ಇನ್ನೂ 9 ರಿಂದ 10 ವರ್ಷ ಸಮಯವಿದೆ’ ಎಂದು ಅವರು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.