ADVERTISEMENT

ಕಂಪ್ಲಿ | ರಕ್ತದಾನ ಶಿಬಿರ: 60 ಯೂನಿಟ್ ರಕ್ತ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 13:44 IST
Last Updated 24 ಆಗಸ್ಟ್ 2024, 13:44 IST
ಕಂಪ್ಲಿ ತಾಲ್ಲೂಕು ಸಣಾಪುರ ಗ್ರಾಮದಲ್ಲಿ ಶನಿವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಮುಖಂಡರು ಪ್ರಮಾಣ ಪತ್ರ ವಿತರಿಸಿದರು
ಕಂಪ್ಲಿ ತಾಲ್ಲೂಕು ಸಣಾಪುರ ಗ್ರಾಮದಲ್ಲಿ ಶನಿವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಮುಖಂಡರು ಪ್ರಮಾಣ ಪತ್ರ ವಿತರಿಸಿದರು   

ಕಂಪ್ಲಿ: ತಾಲ್ಲೂಕಿನ ಸಣಾಪುರ, ಇಟಗಿ, ಮತ್ತು ನಂ.2 ಮುದ್ದಾಪುರ ಗ್ರಾಮಗಳಲ್ಲಿ ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ವಾಮಿ ವಿವೇಕಾನಂದ ರಕ್ತ ಭಂಡಾರ, ಗ್ರಾಮಸ್ಥರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 60 ಯೂನಿಟ್ ರಕ್ತಸಂಗ್ರಹಿಸಲಾಯಿತು.

ಇಟಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮಣಯ್ಯ, ಸಣಾಪುರದಲ್ಲಿ ಗ್ರಾ.ಪಂ. ಸದಸ್ಯ ಹನುಮಂತಪ್ಪ ಮತ್ತು ನಂ.2 ಮುದ್ದಾಪುರದಲ್ಲಿ ಗ್ರಾ.ಪಂ. ಸದಸ್ಯ ಭಾಸ್ಕರರೆಡ್ಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇವಣಸಿದ್ಧ ಕೋರಿ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಕ ಪಿ. ಬಸವರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಜಗನ್ನಾಥ, ಯರಿಸ್ವಾಮಿ, ಸಿಎಚ್‍ಒ ಲಕ್ಷ್ಮೀ ಕಲ್ಯಾಣಿ, ಮುಖಂಡರಾದ ಟಿ. ಶರಣಪ್ಪ, ಬಸವರಾಜ, ರಘುರಾಮ್, ಗುಂಡೂರು ವೀರೇಶಪ್ಪ, ಹನುಮಂತಪ್ಪ, ಪರಮೇಶ್ವರಯ್ಯ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.