ಹೊಸಪೇಟೆ (ವಿಜಯನಗರ): ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್‌ನಿಂದ ಬುಧವಾರ ಸಂಜೆ ನಗರದ ಮನೆಯಂಗಳದಲ್ಲಿ ಭಗವಾನ್ ಗೌತಮ ಬುದ್ಧ ಅವರ 2565ನೇ ಜಯಂತಿ ಪ್ರಯುಕ್ತ ಬೌದ್ಧ ಪೂರ್ಣಿಮೆ ಆಚರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಎನ್. ಚಿನ್ನಸ್ವಾಮಿ ಸೋಸಲೆ ಮಾತನಾಡಿ, ‘ಈ ಪುಣ್ಯ ನೆಲದಲ್ಲಿ ಭಗವಾನ್ ಬುದ್ಧನ ಬೌದ್ಧಧರ್ಮ ಉದಯಿಸಿ 2665 ವರ್ಷಗಳು ಕಳೆದಿವೆ. ಈ ಭಾರತ ಮಣ್ಣಿನ ಮೂಲನಿವಾಸಿಗಳಾದ ನಾವೆಲ್ಲರೂ ನಿಜರೂಪದಲ್ಲಿ ಬೌದ್ಧಧರ್ಮೀಯರೆ. ಸಾವಿರಾರು ವರ್ಷಗಳಲ್ಲಿ ಭಾರತದ ಮೇಲೆ ಅನ್ಯರ ದಾಳಿ, ಪ್ರವೇಶ, ಆಕ್ರಮಣಗಳಿಂದ ಉಂಟಾದ ಹಲವಾರು ಸಾಂಸ್ಕೃತಿಕ ಪಲ್ಲಟಗೊಂಡ ಸಂದರ್ಭಗಳು ನಮ್ಮನ್ನು ವಿವಿಧ ಧರ್ಮಗಳಲ್ಲಿ ಸೇರಿಕೊಳ್ಳುವಂತೆ ಮಾಡಿವೆ. ಹೀಗೆ ಪಲ್ಲಟಗೊಂಡವರು ತಮ್ಮ ಧರ್ಮವನ್ನು ಅಧರ್ಮ- ಅನೀತಿಯ ಮೂಲಕ ಉಳಿಸಿಕೊಳ್ಳಲು ಹಲವಾರು ಸಾಂಸ್ಕೃತಿಕ ಏರುಪೇರುಗಳನ್ನು ಸೃಷ್ಟಿಸಿದ್ದು ಇತಿಹಾಸದ ಭಾಗವಾಗಿದೆ’ ಎಂದು ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ, ಶಿವು, ರಫೀಕ್, ಮಹಾಂತೇಶ, ಯೋಹಾನ್, ರವಿ, ಮಾರುತಿ, ರಘು , ಗಿರಿಜಾ, ಸೋನಿಯಾ, ಸಂಜನಾ, ಹುಲುಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.