ಬಳ್ಳಾರಿ: "ಟ್ರಾಯ್ ಕೇಬಲ್ ಟಿ.ವಿ ದರ ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಡಿ.21ರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು' ಎಂದು ಕೇಬಲ್ ಆಪರೇಟರ್‌ಗಳಾದ ರಾಜೇಶ್ ಕರ್ವ ಕೊಟ್ಟೂರು, ತುಳಸೀರಾಂ ಬಳ್ಳಾರಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ಮುಖ್ಯಮಂತ್ರಿಗ ಡಿ.೨೧ರಂದು ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಗುವುದು.23 ರಂದು ಸಂಜೆ 7ರಿಂದ8 ಗಂಟೆವರೆಗೆ ಜಿಲ್ಲೆಯಲ್ಲಿ ಕೇಬಲ್ ಪ್ರಸಾರ ಸ್ಥಗಿತಗೊಳಿಸಲಾಗುವುದು’ ಎಂದು ತಿಳಿಸಿದರು.
‘24 ರಂದು ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಗುವುದು. ನಗರ ಬಿಡಿಎಎ ಸಭಾಂಗಣ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಜನರ ಗಮನ ಸೆಳೆಯಲಾಗುವುದು’ ಎಂದರು.
‘ಹೊಸ ದರ ನೀತಿ ಪ್ರಕಾರ ಇನ್ನು ಮುಂದೆ ಆರಂಭಿಕ100 ಚಾನೆಲ್‌ಗೆ ಜಿಎಸ್‌ಟಿ ತೆರಿಗೆ ಸೇರಿ ಗ್ರಾಹಕರು ₨154 ಶುಲ್ಕ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕು ಎಂಬುದು ಗ್ರಾಹಕ ವಿರೋಧಿ ನೀತಿ’ ಎಂದು ದೂರಿದರು.
‘ಹೊಸ ದರ ನೀತಿ ಬಗ್ಗೆ ಆಪರೇಟರ್‌ಗಳಿಗೆ ತರಬೇತಿ ಕೊಟ್ಟಿಲ್ಲ. ಡಿ.29 ರಿಂದ ಹೊಸ ಶುಲ್ಕ ಪದ್ಧತಿ ಅನ್ವಯವಾಗುವುದರಿಂದ ಅದಕ್ಕೆ ಹೊಂದಿಕೊಳ್ಳಲು ಸಮಯ ಬಹಳ ಕಡಿಮೆ ಇದೆ. ಹೀಗಾಗಿ ದರ ಪರಿಷ್ಕರಣೆಯನ್ನು ಮುಂದೂಡಬೇಕು’ ಎಂದು ಆಗ್ರಹಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೇಬಲ್ ಆಪರೇಟರ್‌ಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.