ಬಳ್ಳಾರಿ: ಮೊಹರಂ ಮೆರವಣಿಗೆ ವೇಳೆ ಶೆಡ್ ಚಾವಣಿ ಕುಸಿದು ಸಂಭವಿಸಿದ್ದ ದುರಂತದಲ್ಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ಬಂಡಿಹಟ್ಟಿ ನಿವಾಸಿ ಲಕ್ಷ್ಮೀ (40) ಮೃತರು. ಇತ್ತೀಚಿಗೆ ನಗರದ ಹೊರವಲಯ ಹಳೇ ಬೈಪಾಸ್ ರಸ್ತೆ ಬಳಿಯ ಮೈದಾನದಲ್ಲಿ ಮೊಹರಂ ಕೊನೆಯ ದಿನದಂದು ಪೀರಲ ದೇವರ ಸವಾರಿ ನೋಡಲು ಜನರು ಶೆಡ್ ಚಾವಣಿ ಕುಳಿತಿದ್ದರು. ಏಕಾಏಕಿ ಶೆಡ್ ಚಾವಣಿ ಕುಸಿದು ಒಬ್ಬರ ಮೇಲೋಬ್ಬರು ಬಿದ್ದ ಕಾರಣ ಇಬ್ಬರು ಮಹಿಳೆಯರಿಗೆ ಗಾಯವಾಗಿತ್ತು. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜು.23 ರಂದು ಚಿಕಿತ್ಸೆ ಫಲಿಸದೆ ಲಕ್ಷ್ಮೀ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.