ADVERTISEMENT

ಶ್ರೀರಾಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:00 IST
Last Updated 13 ಏಪ್ರಿಲ್ 2019, 13:00 IST
ಶ್ರೀರಾಮ ನವಮಿ ಪ್ರಯುಕ್ತ ಮಾಲಾಧಾರಿಗಳಿಂದ ಕಮಲಾಪುರದಲ್ಲಿ ಸಂಕೀರ್ತನಾ ಯಾತ್ರೆ ನಡೆಯಿತು
ಶ್ರೀರಾಮ ನವಮಿ ಪ್ರಯುಕ್ತ ಮಾಲಾಧಾರಿಗಳಿಂದ ಕಮಲಾಪುರದಲ್ಲಿ ಸಂಕೀರ್ತನಾ ಯಾತ್ರೆ ನಡೆಯಿತು   

ಹೊಸಪೇಟೆ: ಶ್ರೀರಾಮ ನವಮಿ ಪ್ರಯುಕ್ತ ರಾಮ ಮಾಲಾಧಾರಿಗಳು ಶನಿವಾರ ತಾಲ್ಲೂಕಿನ ಕಮಲಾಪುರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡರು.

ಹಿಂದೂ ಜಾಗರಣ ವೇದಿಕೆಯಿಂದ ಆಯೋಜಿಸಿದ್ದ ಆರನೇ ವರ್ಷದ ಕಾರ್ಯಕ್ರಮದಲ್ಲಿ ಪಟ್ಟಣದ ಅನೇಕ ಯುವಕರು ಶ್ರೀರಾಮ ಮಾಲಾಧಾರಣೆ ಮಾಡಿ, ರಾಮನ ಸ್ತುತಿಸುತ್ತ ನಗರದ ಪ್ರಮುಖ ಮಾರ್ಗಗಳಲ್ಲಿ ಹೆಜ್ಜೆ ಹಾಕಿದರು.

ಇದಕ್ಕೂ ಮುನ್ನ ಮಾಲ್ಯವಂತ ರಘುನಾಥ ದೇಗುಲದಲ್ಲಿ ಶ್ರೀರಾಮ ತಾರಕ ಹೋಮ, ಸೀತಾರಾಮ ಕಲ್ಯಾಣ ಕಾರ್ಯಕ್ರಮ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ನಂತರ ಮಡಿ ತೇರು ನಡೆಯಿತು. ಬಳಿಕ ಮಾಲಾಧಾರಿಗಳು ಮಾಲೆಯನ್ನು ವಿಸರ್ಜಿಸಿದರು.

ADVERTISEMENT

ವೇದಿಕೆಯಪ್ರಾಂತ ಸಂಘಟನಾ ಕಾರ್ಯದರ್ಶಿ ಸು.ಕೃಷ್ಣಮೂರ್ತಿ, ಪ್ರಾಂತ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಡಿಗೇರ್, ಮುಖಂಡರಾದ ಮೌನೇಶ್ ಬಡಿಗೇರ್, ಮಣಿಕಂಠ, ವಿರೇಶ್, ಗಿರೀಶ್, ಕುಮಾರ,ನವೀನ್ ಕುಮಾರ್, ಸಿದ್ದೇಶ್ ಪೂಜಾರ, ಗಣೇಶ್ ನೀರ್ಲಿಗಿ, ಬಳಿಗೇರ್ ರಾಮಣ್ಣ, ಲಕ್ಷ್ಮೀಶ, ಮಾಂತೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.