ಸಂಡೂರು: ಪಟ್ಟಣದ ಕ್ರಿಸ್ತಜ್ಯೋತಿ ಚರ್ಚ್‌ನಲ್ಲಿ ಗುಡ್ ಫ್ರೈಡೇ ಅನ್ನು ಕ್ರೈಸ್ತರು ಶುಕ್ರವಾರ ಆಚರಿಸಿದರು.
ಚರ್ಚ್‌ಗೆ ಆಗಮಿಸಿ ವಿವಿಧ ಭಕ್ತಿಗೀತೆಗಳ ಮೂಲಕ ಪ್ರಾರ್ಥಿಸಲಾಯಿತು.ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ್ದರ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು ಈ ದಿನ ಉಪವಾಸವಿದ್ದು ಜಗತ್ತಿನ ಒಳಿತಿಗೆ ಪ್ರಾರ್ಥಿಸುವುದು ಸಂಪ್ರದಾಯ ಎಂದು ಚರ್ಚ್ ನ ಫಾದರ್ ವಸಂತ್ ಕುಮಾರ್ ತಿಳಿಸಿದರು.
ಯೇಸುಕ್ರಿಸ್ತರನ್ನು ಶಿಲುಬೆಗೆ ಏರಿಸುವ ಸಂದರ್ಭದಲ್ಲಿ ನಡೆದ ಘಟನೆಗಳ ಸ್ಮರಣೆಗಾಗಿ ಚರ್ಚ್ ಆವರಣದಲ್ಲಿನ 14 ಸ್ಥಳಗಳಲ್ಲಿ ಶಿಲುಬೆಯನ್ನು ಹೊತ್ತು ವಿಶೇಷವಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಕೃಪಾನಿಲಯ ಕಾನ್ವೆಂಟಿನ ಸಿಸ್ಟರ್ ಸಿಸಿಲಿ ಫೆಲಿಕ್ಸ್, ಸಿಸ್ಟರ್ ರೀಟಾ, ಸಿಸ್ಟರ್ ಶೆರ್ಲಿ, ಸಿಸ್ಟರ್ ದೀಪ್ತಿ ಥಾಮಸ್, ಸಿಸ್ಟರ್ ಸಹನಾ, ಕ್ರಿಶ್ಚಿಯನ್ ಸಮುದಾಯದ ಅನೇಕರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.