ಬಳ್ಳಾರಿ: ‘ರಾಜ್ಯದಲ್ಲಿ ಮೂರೂವರೆ ವರ್ಷ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಮೂಲಕ ಸರ್ಕಾರದ ಅವಧಿ ಪೂರ್ಣಗೊಳ್ಳುವವರೆಗೆ ತಾವೇ ಅಧಿಕಾರದಲ್ಲಿ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದರು.
ಸಂಡೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತ, ‘ಬಿಜೆಪಿಯವರು ನುಡಿದಂತೆ ನಡೆದರಾ? ಮೂರೂವರೆ ವರ್ಷ ಯಾರು ಅಧಿಕಾರದಲ್ಲಿ ಇರಲಿದ್ದಾರೆ? ನೀವು ಯಾರಿಗೆ ಮತ ನೀಡಬೇಕು’ ಎಂದು ಜನರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜನ, ‘ಕಾಂಗ್ರೆಸ್ಸು’ ಎಂದರು. ಆಗ ಮಾತು ಮುಂದುವರಿಸುತ್ತ ತಮ್ಮತ್ತ ಕೈ ಮಾಡಿಕೊಂಡು ಸಿದ್ದರಾಮಯ್ಯ ಜೋರಾಗಿ, ‘ಸಿದ್ದರಾಮಯ್ಯ ಕಾಂಗ್ರೆಸ್ಸು’ ಎಂದು ಹೇಳಿದರು.
‘ಐದು ವರ್ಷ ತುಕಾರಾಂ ಸಂಸದರಾಗಿ ಇರಲಿದ್ದಾರೆ. ಅನ್ನಪೂರ್ಣ ಗೆದ್ದರೆ, ಮೂರುವರೆ ವರ್ಷ ಶಾಸಕಿಯಾಗಿ ಇಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.