ADVERTISEMENT

ರಂಗಭೂಮಿಗೆ ‘ಪ್ರಜಾವಾಣಿ’ ಕೊಡುಗೆ ದೊಡ್ಡದು: ಲಲಿತಾ ಹೊಸಪ್ಯಾಟಿ

‘ಪ್ರಜಾವಾಣಿ @75’ ಸಮಾರಂಭದಲ್ಲಿ ಸಾಹಿತಿ ಲಲಿತಾ ಹೊಸಪ್ಯಾಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2023, 5:00 IST
Last Updated 22 ಮೇ 2023, 5:00 IST
‘ಪ್ರಜಾವಾಣಿ @75’ ಅಂಗವಾಗಿ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಸಾಹಿತಿ ಲಲಿತಾ ಹೊಸಪ್ಯಾಟಿ ಉದ್ಘಾಟಿಸಿದರು
‘ಪ್ರಜಾವಾಣಿ @75’ ಅಂಗವಾಗಿ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಸಾಹಿತಿ ಲಲಿತಾ ಹೊಸಪ್ಯಾಟಿ ಉದ್ಘಾಟಿಸಿದರು   

ಮರಿಯಮ್ಮನಹಳ್ಳಿ: ‘ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ‘ಪ್ರಜಾವಾಣಿ; ಪತ್ರಿಕೆಯು ರಾಜ್ಯ, ದೇಶ ಒಂದೇ ಅಲ್ಲಾ, ಜಗತ್ತಿನಾದ್ಯಂತ ಪತ್ರಿಕೋದ್ಯಮಕ್ಕೆ ತನ್ನದೇ ಆದ ಹಿರಿಮೆಯನ್ನು ತಂದು ಕೊಟ್ಟ ಪತ್ರಿಕೆಯಾಗಿದೆ. ಅದರಲ್ಲೂ ರಂಗಭೂಮಿಗೆ ನೀಡಿದ ಕೊಡುಗೆ ದೊಡ್ಡದು’ ಎಂದು ಸಾಹಿತಿ ಲಲಿತಾ ಹೊಸಪ್ಯಾಟಿ ಹೇಳಿದರು.

ಸ್ಥಳೀಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ‘ಪ್ರಜಾವಾಣಿ @75’ ಅಂಗವಾಗಿ ಹಮ್ಮಿಕೊಂಡಿದ್ದ ಮಾತಾ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನ ಮತ್ತು ಜಾನಪದ ಸಂಗೀತ ಹಾಗೂ ಜೋಗತಿ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚರಿತ್ರೆ ಮನುಷ್ಯನನ್ನು ಮುಂದೊಂದು ದಿನ ಬದಿಗಿಡಬಹುದು, ಆದರೆ ಮನುಷ್ಯ ಮಾಡಿದ ಸಾಧನೆಗಳ ಅಕ್ಷರ ರೂಪ, ಅಕಾರ ಎಂದಿಗೂ ಮರೆಯುದಿಲ್ಲ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದ್ದು, ಅದರಲ್ಲೂ ಸಮಾಜದಲ್ಲಿ ಅತ್ತ ಹೆಣ್ಣು, ಗಂಡು ಅಲ್ಲದ ಮಂಜಮ್ಮ ಜೋಗತಿ ಸವೆಸಿದ ಹಾದಿ ನಿಜಕ್ಕೂ ದೊಡ್ಡದು ಎಂದರು.

ADVERTISEMENT

ಮಂಜಮ್ಮ ಜೋಗತಿ ಮಾತನಾಡಿ, ‘ಸಾಮಾನ್ಯ ಜೋಗತಿ ಕಲಾವಿದೆಯಾದ ನನ್ನನ್ನು ಹಿಂದಿನಿಂದ ಇಲ್ಲಿಯವರೆಗೆ ಸೇರಿದಂತೆ ಪದ್ಮಶ್ರೀ ಪ್ರಶಸ್ತಿ ಪಡೆಯುವಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ದೊಡ್ಡದಿದ್ದು, ಅದರಲ್ಲೂ ‘ಪ್ರಜಾವಾಣಿ’ಯ ಕೊಡುಗೆ ಅಪಾರ’ ಎಂದರು.

ವಿಜಯನಗರ ಜಿಲ್ಲೆಯ ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಶಶಿಕಾಂತ ಎಸ್.ಶಂಬೆಳ್ಳಿ ಮಾತನಾಡಿ, ‘ಕಳೆದ 75 ವರ್ಷದಿಂದ ಪತ್ರಿಕೆ ಸಮಾಜ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅದರಲ್ಲೂ ಮಂಜಮ್ಮ ಜೋಗತಿ ಅವರು ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣ’ ಎಂದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಎಂ.ಎಸ್.ಮೃತ್ಯುಂಜಯ, ರಂಗ ನಿರ್ದೇಶಕ ಬೇಲೂರು ರಘುನಂದನ್, ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಮಾತನಾಡಿದರು.

ರಾಮಕ್ಕ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಎಚ್.ಎಸ್.ಗುರುಪ್ರಸಾದ್ ಸ್ವಾಗತಿಸಿದರೆ, ಸರದಾರ್ ವಂದಿಸಿದರು. ಪುಷ್ಪಾ ನಿರೂಪಿಸಿದರು. ನಂತರ ಮಹಾಂತೇಶ ಸಂಗಡಿಗರಿದಂತೆ ಜಾನಪದ ಸಂಗೀತ ಹಾಗೂ ರಾಮವ್ವ ಜೋಗತಿ ಸಂಗಡಿಗರಿಂದ ಜೋಗತಿ ನೃತ್ಯ ಕಾರ್ಯಕ್ರಮ ನಡೆಯಿತು.

‘ಪ್ರಜಾವಾಣಿ @75’ ಅಂಗವಾಗಿ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಯುವ ಕಲಾವಿದ ಅರುಣ್‍ಕುಮಾರ್ ಅಭಿನಯಿಸಿದರು
ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೋಗತಿ ಕಲಾವಿದರು ಜೋಗತಿ ನೃತ್ಯ ಪ್ರದರ್ಶಿಸಿದರು
ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಮಕ್ಕ ಮತ್ತು ಸಂಗಡಿಗರು ಚೌಡ್ಕಿ ಪದಗಳನ್ನು ಹಾಡಿದರು
ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾಂತೇಶ ಮತ್ತು ಸಂಗಡಿಗರು ಜಾನಪದ ಹಾಡುಗಳನ್ನು ಪ್ರಸ್ತುತ ಪಡೆಸಿದರು
‘ಪ್ರಜಾವಾಣಿ @75’ ಅಂಗವಾಗಿ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಮತ್ತು ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರು
ಪ್ರೇಕ್ಷಕರ ಮನಗೆದ್ದ ‘ಮಾತಾ’
ಮಂಜಮ್ಮ ಜೋಗತಿ ಅವರ ಜೀವನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ಮಂಜಮ್ಮ ಜೋಗತಿ ಅವರು ಹುಟ್ಟಿನಿಂದ ಹಿಡಿದು ಜೋಗತಿಯಾಗಿ ಬದಲಾಗಿ ಪಟ್ಟ ಕಷ್ಟಗಳು ಸಮಾಜ ನೋಡಿದ ರೀತಿ ನೀತಿ ನಂತರ ಬೆಳೆದು ಬಂದ ಹಾದಿಯನ್ನು 80 ನಿಮಿಷಗಳ ಅವಧಿಯಲ್ಲಿ ಬೇಲೂರು ರಘುನಂದನ್ ಅವರ ನಿರ್ದೇಶನದಲ್ಲಿ ಯುವ ಕಲಾವಿದ ಅರುಣ್‍ಕುಮಾರ್ ಅವರ ಅಭಿನಯ ಮನೋಜ್ಞವಾಗಿತ್ತು. ಸವಿತಕ್ಕ ಹಿನ್ನೆಲೆ ಸಂಗೀತ ನೀಡಿದರೆ ಶ್ರೀನಿ ಸಂಪತ್‍ಲಕ್ಷ್ಮಿ ಸಂಗೀತ ನಿರ್ದೇಶನ ಹಾಗೂ ರವಿಶಂಕರ್ ಪ್ರಸಾದನ ನಿರ್ವಹಿಸಿದರೆ ಜಿ.ರಾಘವೇಂದ್ರ ಬೆಳಕು ನಿರ್ವಹಿಸಿದರು.
ಕಣ್ಣೀರಾದ ಮಂಜಮ್ಮ ಜೋಗತಿ
ನಾಟಕದಲ್ಲಿ ಜೋಗತಿಯಾಗಿ ಬದಲಾಗುವ ಸನ್ನಿವೇಶ ಸಮಾಜದ ಕಂಡ ರೀತಿಗೆ ಆತ್ಮಹತ್ಯೆಗೆ ಯತ್ನಿಸಿದ ಕೆಲ ಘಟನೆಗಳು ಸೇರಿದಂತೆ ಕೆಲ ಸನ್ನಿವೇಶಗಳು ಬಂದಾಗ ನಾಟಕ ವೀಕ್ಷಿಸುತ್ತಿದ್ದ ಮಂಜಮ್ಮ ಜೋಗತಿ ಅವರು ಕಣ್ಣೀರಾದಾರು. ಈ ಸಂದರ್ಭದಲ್ಲಿ ಅಕ್ಕಪಕ್ಕ ಕುಳಿತ್ತಿದ್ದವರು ಅವರನ್ನು ಸಂತೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.