ADVERTISEMENT

ಹೆರಕಲ್: ಕೃಷಿಹೊಂಡದಲ್ಲಿ ಮೊಸಳೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:46 IST
Last Updated 21 ಜುಲೈ 2024, 15:46 IST
ತೆಕ್ಕಲಕೋಟೆ ಸಮೀಪದ ಹೆರಕಲ್ ಗ್ರಾಮದ ಕೃಷಿ ಹೊಂಡದಲ್ಲಿ ಕಂಡು ಬಂದು ಎರಡು ಮೊಸಳೆಗಳನ್ನು ಹಿಡಿದು ನದಿಗೆ ಬಿಡಲಾಯಿತು
ತೆಕ್ಕಲಕೋಟೆ ಸಮೀಪದ ಹೆರಕಲ್ ಗ್ರಾಮದ ಕೃಷಿ ಹೊಂಡದಲ್ಲಿ ಕಂಡು ಬಂದು ಎರಡು ಮೊಸಳೆಗಳನ್ನು ಹಿಡಿದು ನದಿಗೆ ಬಿಡಲಾಯಿತು   

ತೆಕ್ಕಲಕೋಟೆ: ಸಮೀಪದ ತುಂಗಭದ್ರಾ ನದಿ ಪಾತ್ರದ ಹೆರಕಲ್ ಗ್ರಾಮದ ನಾಗರಾಜ ಗೌಡ ಇವರ ಕೃಷಿಹೊಂಡದಲ್ಲಿ ಮೊಸಳೆ ಕಂಡು ಬಂದಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.

ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆ ಹಿಡಿಯುವ ಹಳೆಕೋಟೆ ಗ್ರಾಮದ ವೇಷಗಾರ ಮಲ್ಲಯ್ಯರನ್ನು ಕರೆಸಿ ಮೊಸಳೆ ಹಿಡಿಯಲು ಹರಸಾಹಸ ಪಟ್ಟಿದ್ದಾರೆ.

ಕೃಷಿ ಹೊಂಡದಲ್ಲಿ ಎರಡು ಮೊಸಳೆಗಳು ಕಂಡು ಬಂದಿದ್ದು ಅವನ್ನು ಹಿಡಿದು ಸಮೀಪದ ತುಂಗಭದ್ರಾ ನದಿಗೆ ಬಿಡಲಾಯಿತು ಎಂದು ಅರಣ್ಯ ಅಧಿಕಾರಿ ಅಮ್ಮಣ ನಾಯಕ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.