ADVERTISEMENT

ದೇಶಕ್ಕೆ ಮಲ್ಲಿಗೆ ಹೂ ಒಗದಾಳ: ಮಳಮಲ್ಲೇಶ್ವರ ಸ್ವಾಮಿ ಕಾರ್ಣಿಕ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 10:13 IST
Last Updated 13 ಅಕ್ಟೋಬರ್ 2024, 10:13 IST
   

ಸಿರುಗುಪ್ಪ (ಬಳ್ಳಾರಿ): ಶ್ರೀ ಕ್ಷೇತ್ರ ದೇವರಗುಡ್ಡದ ಮಳಮಲ್ಲೇಶ್ವರಸ್ವಾಮಿ ದೇವಸ್ಥಾನದ ಕಾರ್ಣಿಕೋತ್ಸವದಲ್ಲಿ 'ದೇಶಕ್ಕೆ ಮಲ್ಲಿಗೆ ಹೂ ಒಗದಾಳ' ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ತಾಲ್ಲೂಕಿನ ಭಾಗ, ಕರ್ನೂಲ್ ಜಿಲ್ಲೆಯ ಆಲೂರು ತಾಲ್ಲೂಕಿನ ಹೊಳಗುಂದೆ ಮಂಡಲದ ದೇವರಗುಡ್ಡದಲ್ಲಿ ಐತಿಹಾಸಿಕ ಮಳಮಲ್ಲೇಶ್ವರಸ್ವಾಮಿ ದೇವಸ್ಥಾನವಿದೆ. ದಸರಾ ಪ್ರಯುಕ್ತ ಎಂದಿನಂತೇ ಈ ಬಾರಿಯೂ ಕಾರ್ಣಿಕೋತ್ಸವ ನಡೆಯಿತು.

ನವರಾತ್ರಿ ವೇಳೆ ಭವಿಷ್ಯವಾಣಿ ನುಡಿಯುವ ಗೊರವಯ್ಯ 9 ದಿನ ಉಪವಾಸ ವಿದ್ದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವಸ್ಥಾನ ಏರಿ ಕಾರ್ಣಿಕ ನುಡಿಯುತ್ತಾನೆ.

ADVERTISEMENT

ಈ ವರ್ಷದ ಪೂರ್ಣ ಕಾರ್ಣಿಕದ ನುಡಿಯನ್ನು ಮಳಮಲ್ಲೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಗಿರಿಮಲ್ಲಯ್ಯಸ್ವಾಮಿ ಹೇಳಿದ್ದಾರೆ.

'ದೇಶಕ್ಕೆ ಮಲ್ಲಿಗೆ ಹೂ ಒಗದಾಳ, ಚಿಕ್ಕ ಜಾನ ಮಾಡಬೇಕು, ಗಂಗೇ ಹೊಳೆ ದಂಡಿಗೆ ನಿಂತಾಳ, ನಿಂತು ಬರುತ್ತಾಳಾ, 6700 ನಗಳ್ಳಿ(ಹತ್ತಿ), 3400 ಹೊಕ್ಕಳ ಜೋಳ, ಮೂರು ಆರಾದೀತು, ಆರು ಮೂರಾದೀತು ಬಹು ಪರಾಕ್' ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದರು.

ಈ ನುಡಿಯನ್ನು ದೇವಸ್ಥಾನದ ವತಿಯಿಂದ ವಿಶ್ಲೇಷಣೆ ಮಾಡಲಾಗಿದ್ದು, 'ಹತ್ತಿ, ಜೋಳದ ಬೆಳೆಗಳು ಸಮೃದ್ಧವಾಗಲಿವೆ. ಶಾಂತಿ ನೆಲೆಸಲಿದೆ' ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.