ಕಂಪ್ಲಿ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ದೇವಾಂಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಪ್ಪರದ ರಾಘವೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ಜರುಗಿದ ದೇವಲ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸರ್ಕಾರದ ವತಿಯಿಂದ ಮಹರ್ಷಿಗಳ ಜಯಂತಿ ಆಚರಿಸಬೇಕು ಎಂದು ಮನವಿ ಮಾಡಿದರು.
ಮಹರ್ಷಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ, ಚೌಡೇಶ್ವರಿದೇವಿ ವಿಗ್ರಹ ಮತ್ತು ನವಗ್ರಹಗಳಿಗೆ ವಿಶೇಷ ಅಭಿಷೇಕ, ಸಪ್ತರ್ಷಿಗಳ ಪ್ರತಿಷ್ಠಾಪನಾ ಪೂರ್ವ ಪೂಜಾ, ವಸ್ತ್ರದಾನ ಕಾರ್ಯಕ್ರಮಗಳು ನಡೆದವು.
ಪ್ರಮುಖರಾದ ಸುಮಿತ್ರಮ್ಮ ದೇವಾಂಗಮಠ, ಮಂಜುನಾಥ ದೇವಾಂಗಮಠ, ಅರ್ಚಕ ಮಿಟ್ಟಿ ಶಂಕರ, ರಾಜೇಶವರ್ಮ, ಗದ್ಗಿ ವಿರುಪಾಕ್ಷಿ, ತುಳಸಿ ರಾಮಚಂದ್ರ, ಶೀಲವಂತರ ನೀಲಕಂಠ, ಇತರರು ಇದ್ದರು.
ನಂ.10 ಮುದ್ದಾಪುರ ಗ್ರಾಮ: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ದೇವಾಂಗ ಸಮುದಾಯದ ಕುಲಗುರು ದೇವಲ ಮಹರ್ಷಿ ಜಯಂತ್ಯುತ್ಸವ ಜರುಗಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಬಳಿಕ ಪ್ರಮುಖ ಬೀದಿಗಳಲ್ಲಿ ದೇವಲ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ನಡೆಯಿತು.
ಇದಕ್ಕು ಮುನ್ನ ನಡೆದ ಸಮಾರಂಭದಲ್ಲಿ ಶಾಸಕ ಜೆ.ಎನ್. ಗಣೇಶ ಮಾತನಾಡಿ, ಸಮುದಾಯ ಭವನ ಪೂರ್ಣಗೊಳಿಸಲು ಅಗತ್ಯ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ದೇವಾಂಗ ಸಮಾಜದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.