ADVERTISEMENT

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:21 IST
Last Updated 13 ಏಪ್ರಿಲ್ 2024, 14:21 IST
ಕಂಪ್ಲಿಯ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು
ಕಂಪ್ಲಿಯ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು   

ಕಂಪ್ಲಿ: ಪಟ್ಟಣದ ದೇವಾಂಗ ಸಮಾಜದ ಬಣ್ಣದ ಚೌಡೇಶ್ವರಿ ದೇವಸ್ಥಾನ, ನೇಕಾರ ಸಮುದಾಯಗಳ ಸಂಘದ ಕಚೇರಿ ಮತ್ತು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.

ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಂಗ ಸಮಾಜ ಸಂಘದ ಅಧ್ಯಕ್ಷ ಸಪ್ಪರದ ರಾಘವೇಂದ್ರ ಮಾತನಾಡಿ, ‘ರಾಜ್ಯದಲ್ಲಿ ದೇವಾಂಗ ಸಮುದಾಯದವರು ಆರ್ಥಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದ್ದಾರೆ. ದೇವಾಂಗ ಸಮಾಜದ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ನೇಕಾರ ಸಮುದಾಯಗಳ ಸಂಘದ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಕಂಪ್ಲಿ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಗದ್ಗಿ ವಿರುಪಾಕ್ಷಿ ಅವರನ್ನು ಸತ್ಕರಿಸಲಾಯಿತು. ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವರದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ADVERTISEMENT

ತಹಶೀಲ್ದಾರ್ ಶಿವರಾಜ, ದೇವಾಂಗ ಸಮಾಜದ ಗುರುಗಳಾದ ಮಂಜುನಾಥಸ್ವಾಮಿ, ಅರ್ಚಕ ಮಿಟ್ಟಿ ಶಂಕರ್, ಸಂಘದ ಪದಾಧಿಕಾರಿಗಳಾದ ರಾಜೇಶ್‍ವರ್ಮ, ದೂಪದ ಪ್ರಶಾಂತ್, ವನಕಿ ಶಂಕರ್, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪಿ. ಬ್ರಹ್ಮಯ್ಯ, ಪದಾಧಿಕಾರಿಗಳಾದ ಜಿ. ಸುಧಾಕರ, ಜಗದೀಶ್ ಪೂಜಾರ, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಶಿರಸ್ತೇದಾರರಾದ ಜಿ. ಪಂಪಾಪತಿ, ಎಸ್.ಡಿ. ರಮೇಶ್, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.