ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಅವರು ಸೋಮವಾರ ನಗರದಲ್ಲಿ ಜಾಗಟೆ ಬಾರಿಸುತ್ತ ಪ್ರಚಾರ ಕೈಗೊಂಡರು.
ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಬಂಗಲೆ ಹಿಂಭಾಗ, ಬಸವ ಕಾಲುವೆಯ ಬಳಿ ಪ್ರಚಾರ ನಡೆಸಿದರು. ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಂಗ್ ಬಂಗಲೆ ಎದುರು ಎಷ್ಟೊಂದು ಸ್ವಚ್ಛವಾಗಿದೆ. ಸುಂದರವಾದ ಉದ್ಯಾನ, ಅಚ್ಚುಕಟ್ಟಿನ ಚರಂಡಿ ವ್ಯವಸ್ಥೆ ಇದೆ. ಒಂದಿಂಚೂ ಕಸ ಇಲ್ಲ. ಇಡೀ ಊರು ಹೀಗಿದ್ದರೆ ಎಷ್ಟೊಂದು ಸುಂದರವಾಗಿರುತ್ತಿತ್ತು. ಅವರು ಸ್ವಾರ್ಥಿ ಎನ್ನುವುದಕ್ಕೆ ಇದೊಂದೆ ಸಾಕ್ಷಿ’ ಎಂದು ಟೀಕಿಸಿದರು.
‘ವಿಜಯನಗರ ಕಾಲುವೆಗಳಲ್ಲಿ ಚರಂಡಿ ನೀರು ಸೇರಿಕೊಂಡು ದುರ್ಗಂಧ ಬರುತ್ತಿದೆ. ಅವುಗಳ ಜೀರ್ಣೊದ್ಧಾರಕ್ಕೆ ಏನಾದರೂ ಸಿಂಗ್ ಕೆಲಸ ಮಾಡಿದ್ದಾರಾ? ಇಲ್ಲ ಎಂದ ಮೇಲೆ ಅಂಥವರನ್ನು ಏಕೆ ಆರಿಸಬೇಕು. ಮೂರು ಸಲ ಗೆದ್ದು ಅವರೇನು ಮಾಡಿದ್ದಾರೆ’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.