ADVERTISEMENT

‘ಅಂಗವಿಕಲರ ಕಲ್ಯಾಣಕ್ಕೆ ಅನುದಾನ ಬಳಸಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 9:12 IST
Last Updated 20 ಜನವರಿ 2021, 9:12 IST
ನವಸ್ಫೂರ್ತಿ ಅಂಗವಿಕಲರ ಸಂಘದವರು ಬುಧವಾರ ಹೊಸಪೇಟೆಯಲ್ಲಿ ನಗರಸಭೆ ವ್ಯವಸ್ಥಾಪಕ ಗುರುರಾಜ ಸೌದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ನವಸ್ಫೂರ್ತಿ ಅಂಗವಿಕಲರ ಸಂಘದವರು ಬುಧವಾರ ಹೊಸಪೇಟೆಯಲ್ಲಿ ನಗರಸಭೆ ವ್ಯವಸ್ಥಾಪಕ ಗುರುರಾಜ ಸೌದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ಅಂಗವಿಕಲರಿಗೆ ಮೀಸಲಿಟ್ಟಿರುವ ಅನುದಾನವನ್ನು ಅವರ ಕ್ಷೇಮಾಭಿವೃದ್ಧಿಗೆ ಬಳಸಬೇಕೆಂದು ಆಗ್ರಹಿಸಿ ನವಸ್ಫೂರ್ತಿ ಅಂಗವಿಕಲರ ಸಂಘದವರು ಬುಧವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ವ್ಯವಸ್ಥಾಪಕ ಗುರುರಾಜ ಸೌದಿ ಅವರಿಗೆ ಸಲ್ಲಿಸಿದರು.

ಅಂಗವಿಕಲರಿಗೆ ಮೀಸಲಿಡುವ ಶೇ 5ರಷ್ಟು ಅನುದಾನ ನಗರಸಭೆ ಬಳಸಿಲ್ಲ. ತ್ರಿಚಕ್ರ ವಾಹನಗಳ ಖರೀದಿಗೆ ಟೆಂಡರ್‌ ಕರೆದು, ಅಂಗವಿಕಲರಿಗೆ ವಿತರಿಸಬೇಕು. ನಗರಸಭೆಯಲ್ಲೇ ಹಾಳಾಗುತ್ತಿರುವ ಅಂಗವಿಕಲರ ಸಾಧನ, ಸಲಕರಣೆಗಳನ್ನು ಅಗತ್ಯ ಇರುವವರಿಗೆ ಹಂಚಿಕೆ ಮಾಡಬೇಕು. ತಾಲ್ಲೂಕು ಕ್ರೀಡಾಂಗಣದ ಎದುರು ಅಂಗವಿಕಲರ ಉದ್ಯಾನ ನಿರ್ಮಿಸಲಾಗಿದ್ದು, ಬಳಕೆ ಯೋಗ್ಯ ಮಾಡಬೇಕು. ಸಂಕ್ಲಾಪುರದಲ್ಲಿ ನಿರ್ಮಿಸಿರುವ ಅಂಗವಿಕಲರ ಸಮುದಾಯ ಭವನ ಆದಷ್ಟು ಶೀಘ್ರ ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂಘದ ಅಧ್ಯಕ್ಷ ಡಿ. ಶಿವಕುಮಾರ್‌, ಕಾರ್ಯದರ್ಶಿ ಮಹಾರಾಜ ಸತೀಶ್‌ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.