ADVERTISEMENT

ವೈದ್ಯ, ರೋಗಿ ಸಂಬಂಧ ಗಟ್ಟಿ | ಭದ್ರತಾ ಯೋಜನೆಯ ಅತ್ಯುತ್ತಮ: ಡಾ.ಮಧುಸೂದನ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:43 IST
Last Updated 18 ನವೆಂಬರ್ 2024, 15:43 IST
ಸಿರುಗುಪ್ಪ ನಗರದ ವೈಷ್ಣವಿ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ವೈದ್ಯ ವೃತ್ತಿ ಭದ್ರತಾ ಯೋಜನೆಯ ರಾಜ್ಯ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆಯಾದ ಸಿರುಗುಪ್ಪದ ವೈದ್ಯ ಡಾ.ಮಧುಸೂದನ ಕಾರಿಗನೂರು ಅವರನ್ನು ಸನ್ಮಾನಿಸಲಾಯಿತು
ಸಿರುಗುಪ್ಪ ನಗರದ ವೈಷ್ಣವಿ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ವೈದ್ಯ ವೃತ್ತಿ ಭದ್ರತಾ ಯೋಜನೆಯ ರಾಜ್ಯ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆಯಾದ ಸಿರುಗುಪ್ಪದ ವೈದ್ಯ ಡಾ.ಮಧುಸೂದನ ಕಾರಿಗನೂರು ಅವರನ್ನು ಸನ್ಮಾನಿಸಲಾಯಿತು   

ಸಿರುಗುಪ್ಪ: ವೈದ್ಯ ಮತ್ತು ರೋಗಿಗಳ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ವೈದ್ಯ ವೃತ್ತಿ ಭದ್ರತಾ ಯೋಜನೆಯ ಅತ್ಯುತ್ತಮ ಪಾತ್ರ ವಹಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ವೈದ್ಯ ವೃತ್ತಿ ಭದ್ರತಾ ಯೋಜನೆಯ ರಾಜ್ಯಾಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಹೇಳಿದರು.

ನಗರದ ವೈಷ್ಣವಿ ಸಭಾಂಗಣದಲ್ಲಿ ಸೃಜನಾ ಪ್ರತಿಷ್ಠಾನದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯರು ಆತಂಕದ ಸಮಯದಲ್ಲಿ ಕಾನೂನಿನ ನೆರವು ಮತ್ತು ಧೈರ್ಯ ನೀಡುವ ಭರವಸೆಯನ್ನು ಈ ಯೋಜನೆಯು ವಕೀಲರ ಸಹಾಯವನ್ನು ನೀಡುತ್ತಿದೆ ಎಂದರು.

ADVERTISEMENT

ಹಾಸ್ಯ ಕಲಾವಿದ ನರಸಿಂಹ ಮೂರ್ತಿ ಮಾತನಾಡಿದರು. ಡಾ.ಮಧುಸೂದನ ಕಾರಿಗನೂರು ಅವರನ್ನು ಸನ್ಮಾನಿಸಲಾಯಿತು. ಸದಸ್ಯರಾದ ಡಾ. ಪ್ರಭಾವತಿ ಕಾರಿಗನೂರು, ಡಾ.ಗಂಗಮ್ಮ, ಎಸ್.ಎಂ.ಹಿರೇಮಠ, ವೆಂಕಟೇಶ್ ಯಾದವ್, ವೆಂಕಟೇಶ್ ಕೆ, ಪ್ರವೀಣ್ ಕುಮಾರ್, ಎಂ.ವೀರೇಶ್ ಸ್ವಾಮಿ, ವಿನೋದ್ ಕುಮಾರ್, ಬಿ.ಶಿವಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.