ಕಂಪ್ಲಿ: ಇಲ್ಲಿಯ ವಿಶ್ವಕರ್ಮ ಸಮುದಾಯದ ಶ್ರೀಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಶ್ವಕರ್ಮ ಮಹಿಳಾ ಮಂಡಳಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಡಿ.ಪೂಜಾ ಭರತ್, ಡಿ.ಜ್ಯೋತಿ, ಎ.ಅನುಷಾ, ಭಾರತಿ ಇತರರು ಆಕರ್ಷಕ ರಂಗೋಲಿ ಚಿತ್ರಿಸಿ ಗಮನ ಸೆಳೆದರು. ಬಳಿಕ ಮಕ್ಕಳಿಂದ ಭರತನಾಟ್ಯ, ಸಂಗೀತ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡವು.
ಇದಕ್ಕೂ ಮುನ್ನ ವಿಶ್ವಕರ್ಮ ಸಮಾಜ ಸಂಘದ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, 67ವರ್ಷಗಳಿಂದ ನಿರಂತರವಾಗಿ ದಸರಾ ಅಂಗವಾಗಿ ಶ್ರೀದೇವಿ ಪುರಾಣ ಆಯೋಜಿಸಲಾಗುತ್ತಿದೆ. ಪುರಾಣ ಪಠಣ ಮತ್ತು ಆಲಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂದರು.
ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಡಿ. ವೀಣಾ, ಪದಾಧಿಕಾರಿಗಳಾದ ಶೀಲಾವತಿ, ಪೂಜಾ, ಸವಿತಾ, ಜಯಲಕ್ಷ್ಮಿ, ಕಲಾವತಿ, ಸಮಾಜದ ಅಧ್ಯಕ್ಷ ಡಿ.ಎ. ರುದ್ರಪ್ಪಾಚಾರ್, ಕಾಳಾಚಾರಿ, ಚಂದ್ರಶೇಖರ್, ಶಶಿಧರ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.