ಬಳ್ಳಾರಿ: ಲೋಕಸಭಾ ಕ್ಷೇತ್ರದ ಶಿವಸೇನಾ ಪಕ್ಷದ ಅಭ್ಯರ್ಥಿ ಬಿ.ಈಶ್ವರಪ್ಪ ಮಂಗಳವಾರ ನಗರದ ದುರ್ಗಮ್ಮ ಗುಡಿ, ತಾಳೂರು ರಸ್ತೆ, ಕಪ್ಪಗಲ್ಲು ರಸ್ತೆ, ಗಡಿಗಿ ಚೆನ್ನಪ್ಪ ವೃತ್ತ ಮತ್ತು ಬೆಂಗಳೂರು ರಸ್ತೆಗಳಲ್ಲಿ ಪ್ರಚಾರ ಕೈಗೊಂಡರು.
ದುರ್ಗಮ್ಮ ದೇವಸ್ಥಾನದಿಂದ ಮತಯಾಚನೆ ಪ್ರಾರಂಭಿಸಿದ ಅಭ್ಯರ್ಥಿ ಪ್ರಮುಖವಾಗಿ ಬೀದಿ ಬದಿ ವ್ಯಾಪಾರಿಗಳ ಬಳಿ ತೆರಳಿ ತಮಗೆ ಮತ ನೀಡುವಂತ ಮನವಿ ಮಾಡಿಕೊಂಡರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕುಮಾರಂ ಅಕಾರಿ ಅವರು ಅಭ್ಯರ್ಥಿ ಜೊತೆಗೂಡಿ ಪ್ರಮುಖ ರಸ್ತೆಗಳಲ್ಲಿ ಪಕ್ಷದ ಪರ ಕರಪತ್ರಗಳನ್ನು ಹಂಚಿಕೆ ಮಅಡಿ ಮತಯಾಚನೆ ಮಾಡಿದರು.
ಅಭ್ಯರ್ಥಿ ಪರವಾಗಿ ಮತ ಚಲಾಯಿಸಿ ಚುನಾವಣೆಯಲ್ಲಿ ಗೆಲ್ಲಿಸಿದರೆ, ಬಡಜನರಿಗೆ ಮೂಲಭೂತ ಸೌಕರ್ಯಗಳನ್ನು ದೊರಕಿಸಕೊಡಲು ಶ್ರಮಿಸಲಾಗುವುದು. ಶಿವಸೇನಾ ಪಕ್ಷಕ್ಕೆ ಜನರು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡಬೇಕು ಎಂದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಅಂಗಡಿಗಳಿಗೆ ತೆರಳಿ ಮನವಿ ಮಾಡಿಕೊಂಡರು.
ಮುಖಂಡರಾದ ಎ.ವಿ.ಷಣ್ಮುಖಪ್ಪ,ತಿಪ್ಪೇರುದ್ರಸ್ವಾಮಿ, ಸುಲೋಚನಮ್ಮ, ಪಿ.ಎಚ್.ತಿಪ್ಪೇರುದ್ರಪ್ಪ ಪ್ರಚಾರದಲ್ಲಿ ಅಭ್ಯರ್ಥಿಗೆ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.