ADVERTISEMENT

ಈಶ್ವರಪ್ಪ ಬಿಜೆಪಿಯ ಕಟ್ಟಾಳು, ಅವರ ಮನವೊಲಿಸುವ ವಿಶ್ವಾಸ ಇದೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 9:47 IST
Last Updated 15 ಮಾರ್ಚ್ 2024, 9:47 IST
<div class="paragraphs"><p>ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರು ಶುಕ್ರವಾರ ಹೊಸಪೇಟೆ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ   ಜೋಗ ತಾತನವರನ್ನು ಭೇಟಿ ಮಾಡಿ, &nbsp;ಆಶೀರ್ವಾದ&nbsp;ಪಡೆದರು</p><p></p></div>

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರು ಶುಕ್ರವಾರ ಹೊಸಪೇಟೆ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಜೋಗ ತಾತನವರನ್ನು ಭೇಟಿ ಮಾಡಿ,  ಆಶೀರ್ವಾದ ಪಡೆದರು

   

ಹೊಸಪೇಟೆ (ವಿಜಯನಗರ): ಕೆ.ಎಸ್.ಈಶ್ವರಪ್ಪ ಅವರು ಬಹಳ ನಿಷ್ಠುರವಾದಿ, ಆದರೆ ಅವರ ಮನಸ್ಸು ಮಗುವಿನಂತಹದ್ದು. ಟಿಕೆಟ್ ನೀಡಿಕೆ ವಿಚಾರದಲ್ಲಿ ಅವರಿಗೆ ಬೇಸರ ಆಗಿರಬಹುದು, ಅವರನ್ನು ಸ್ವತಃ ಯಡಿಯೂರಪ್ಪ ಅವರೇ ಸಮಾಧಾನಪಡಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.

ADVERTISEMENT

‘ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರು ಆಪ್ತ ಸ್ನೇಹಿತರು. ಸಣ್ಣಪುಟ್ಟ ವಿಚಾರಗಳಲ್ಲಿ ಮನಸ್ತಾಪ ಬಂದರೂ ಅದನ್ನು ಬಗೆಹರಿಸುವ ಶಕ್ತಿ ಇಬ್ಬರಿಗೂ ಇದೆ. ಈಶ್ವರಪ್ಪ ಅವರನ್ನು ಸಮಾಧಾನಪಡಿಸುವಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವೆ ಹಲವು ಬಾರಿ ಬೈದಾಟ ನಡೆದುದು ಇದೆ. ಆಗ ಅವರ ಮಧ್ಯೆ ಹೋಗಿ ನಾವೇ ಅದೆಷ್ಟೋ ಬಾರಿ ಪೇಚಾಟಕ್ಕೆ ಸಿಲುಕಿದ್ದೂ ಇದೆ. ಏಕೆಂದರೆ ಅವರೊಳಗಿನ ಸಿಟ್ಟು ಏನಿದ್ದರೂ ಕ್ಷಣಿಕ. ಇಬ್ಬರಿಗೂ ಇಬ್ಬರನ್ನೂ ಸಮಾಧಾನಪಡಿಸುವ ತಾಕತ್ತು ಇದೆ. ಹೀಗಾಗಿ ಈ ಬಾರಿ ಎದುರಾಗಿರುವ ಬಿಕ್ಕಟ್ಟನ್ನು ಸಹ ಸೌಹಾರ್ದಯುತವಾಗಿ ಬಗೆಹರಿಸುವುದು ನಿಶ್ಚಿತ’ ಎಂದರು.

ಆನಂದ್ ಸಿಂಗ್ ನೇತೃತ್ವದಲ್ಲೇ ಮತಯಾಚನೆ: ‘ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಆನಂದ್ ಸಿಂಗ್ ಅವರ ಪ್ರಭಾವ ಈಗಲೂ ಬಲವಾಗಿಯೇ ಇದೆ. ವಿಜಯನಗರ ಜಿಲ್ಲೆಯಲ್ಲಂತೂ ಅವರ ನೇತೃತ್ವದಲ್ಲೇ ಚುನಾವಣಾ ಪ್ರಚಾರ ನಡೆಯಲಿದೆ. ರಾಜಕೀಯದಿಂದ ದೂರ ಇರುವುದಾಗಿ ಅವರು ಈ ಮೊದಲು ಹೇಳಿರಬಹುದು, ಆದರೆ ಅವರ ಮನವೊಲಿಸಿ ನಮ್ಮೊಂದಿಗೆ ಕರೆತರುವುದು ನಿಶ್ಚಿತ’ ಎಂದು ಶ್ರೀರಾಮುಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.