ADVERTISEMENT

ಈಶಾನ್ಯ ಸಾರಿಗೆ ಫೋನ್ ಇನ್‌ಗೆ 24 ಕರೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 9:59 IST
Last Updated 8 ಸೆಪ್ಟೆಂಬರ್ 2021, 9:59 IST
ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ನೇರ ಫೋನ್‌ ಇನ್‌ನಲ್ಲಿ ಸಾರ್ವಜನಿಕರ ಕರೆಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ (ಬಲಬದಿ) ಸ್ವೀಕರಿಸಿ ಉತ್ತರಿಸಿದರು. ಸಂಸ್ಥೆಯ ಸಿಬ್ಬಂದಿ ಇದ್ದಾರೆ
ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ನೇರ ಫೋನ್‌ ಇನ್‌ನಲ್ಲಿ ಸಾರ್ವಜನಿಕರ ಕರೆಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ (ಬಲಬದಿ) ಸ್ವೀಕರಿಸಿ ಉತ್ತರಿಸಿದರು. ಸಂಸ್ಥೆಯ ಸಿಬ್ಬಂದಿ ಇದ್ದಾರೆ   

ಹೊಸಪೇಟೆ(ವಿಜಯನಗರ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲೇ ಮೊದಲ ಬಾರಿಗೆ ಹೊಸಪೇಟೆ ವಿಭಾಗದಿಂದ ಬುಧವಾರ ಪ್ರಯಾಣಿಕರ ಕುಂದು ಕೊರತೆ ಆಲಿಸಲು ಏರ್ಪಡಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ 24 ಜನ ಕರೆ ಮಾಡಿ ಅವರ ಸಮಸ್ಯೆ ಹೇಳಿಕೊಂಡರು.

ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರು ಸಾರ್ವಜನಿಕರ ಕರೆ ಸ್ವೀಕರಿಸಿ, ಅದಕ್ಕೆ ತಾಳ್ಮೆಯಿಂದ ಉತ್ತರ ನೀಡಿದರು. ಅವರ ಕಚೇರಿಯ ಸಿಬ್ಬಂದಿ ಪ್ರತಿಯೊಂದು ಕರೆಯ ಮಾಹಿತಿ ದಾಖಲಿಸಿದರು.

ಬಳಿಕ ಮಾತನಾಡಿದ ಜಿ.ಶೀನಯ್ಯ, ‘ಪ್ರಯಾಣಿಕರು, ವಿದ್ಯಾರ್ಥಿಗಳ ಸಮಸ್ಯೆ ತಿಳಿಯಲು ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲೇ ಮೊದಲ ನೇರ ಫೋನ್ ಕಾರ್ಯಕ್ರಮ ಅನುಷ್ಠಾನಗೊಳಿಸಿ ಆರಂಭಿಸಿದ ವಿಭಾಗ ನಮ್ಮದಾಗಿದೆ. ಪ್ರತಿ ತಿಂಗಳ ಎರಡನೇ ಬುಧವಾರ ಫೋನ್ ಇನ್ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

‘ಒಟ್ಟು 24 ಜನರಿಂದ ಕರೆಗಳು ಬಂದಿದ್ದವು. ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಿಂದ ಕರೆಮಾಡಿ ಜನ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಹರಪನಹಳ್ಳಿ-ಉಚ್ಚಂಗಿದುರ್ಗ-ದಾವಣಗೆರೆ ಮಾರ್ಗವಾಗಿ ಬಸ್ ಓಡಿಸಬೇಕು. ಹಂಪಸಾಗರಕ್ಕೆ ಬಸ್ ಬಿಡಬೇಕು. ತಾಲ್ಲೂಕಿನ ಕಡ್ಡಿರಾಂಪುರ ಗ್ರಾಮಕ್ಕೆ ರಾತ್ರಿ 9.30ರ ವರೆಗೆ ಬಸ್‌ ಓಡಿಸಬೇಕು. ಮಗಿಮಾವಿನಹಳ್ಳಿ ಭಾಗದಲ್ಲಿ ಶಾಲಾ ಸಮಯಕ್ಕೆ ಬಸ್‌ ಓಡಿಸಬೇಕು ಎಂದು ತಿಳಿಸಿದ್ದಾರೆ. ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.