ADVERTISEMENT

ಸಂಡೂರು: ತೊಣಸಿಗೆರೆ ಗ್ರಾಮಕ್ಕೆ ನುಗ್ಗಿ‌ದ್ದ ಕರಡಿ ಸೆರೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 6:51 IST
Last Updated 14 ಜುಲೈ 2024, 6:51 IST
<div class="paragraphs"><p>bear</p></div>
   

bear

ಸಂಡೂರು(ಬಳ್ಳಾರಿ): ತಾಲ್ಲೂಕಿನ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊಣಸಿಗೆರೆ ಗ್ರಾಮದೊಳಗೆ‌ ನುಗ್ಗಿ‌ ಆತಂಕ ಸೃಷ್ಟಿಸಿದ್ದ ಕರಡಿಯೊಂದನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ.

ಈಗ್ಗೆ ಮೂರ್ನಾಲ್ಕು‌ ದಿನಗಳಿಂದ ಕರಡಿ‌ ಗ್ರಾಮಮಸ್ಥರಿಗೆ ಕಾಟ ಕೊಡುತ್ತಿತ್ತು. ಊರ ಮಧ್ಯೆ ಬಂದು ಮನೆಗಳಲ್ಲಿ ಇಟ್ಟಿದ್ದ ಅಡುಗೆ ಎಣ್ಣೆ ಕುಡಿದು ಸಾಮಾನುಗಳನ್ನು‌ ಚೆಲ್ಲಾಪಿಲ್ಲಿ ಮಾಡುತ್ತಿದೆ ಎಂದು ಅರಣ್ಯ ಇಲಾಖೆಗೆ ದೂರುಗಳು ಬಂದಿದ್ದವು. ಅರಣ್ಯ ಇಲಾಖೆಯವರು ಹುಡುಕಾಟ ನಡೆಸಿದ್ದರೂ ಕರಡಿ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗಿನ ಜಾವ ಗ್ರಾಮದ ಗಂಗಮ್ಮ ಎಂಬುವವರ ಹೋಟೆಲ್‌ನಲ್ಲಿ ನುಗ್ಗಿದೆ. ಜನರು ಕೂಗಾಡಿದಾಗ ಇಲ್ಲಿನ‌ ಶಾಲಾವರಣದಲ್ಲಿ‌ ಸೇರಿಕೊಂಡಿದೆ. ನಂತರ ಅರಣ್ಯ ಇಲಾಖೆಯವರು ಬಂದು‌ ಗ್ರಾಮಸ್ಥರ ಸಹಾಯದಿಂದ ಕರಡಿಯನ್ನು‌ ಸೆರೆ‌ ಹಿಡಿದಿದ್ದಾರೆ.

ADVERTISEMENT

'ಕರಡಿಯ ಕಾಲಿಗೆ ಬಲವಾದ ಗಾಯವಾಗಿದ್ದು ಅರಣ್ಯದಲ್ಲಿ‌ ಆಹಾರ ಹುಡುಕಲಾಗದೆ ಊರೊಳಗೆ‌ ನುಗ್ಗಿದೆ. ಕಮಲಾಪುರಕ್ಕೆ ತೆಗೆದುಕೊಂಡು‌ ಹೋಗಿ ಚಿಕಿತ್ಸೆ ನೀಡಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಡಿಆರ್‌ಎಫ್ಒ ಜಡಿಯಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.