ADVERTISEMENT

ಕುರುಗೋಡು: ರೈತರಿಗೆ ₹1.93 ಕೋಟಿ ವಂಚನೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:24 IST
Last Updated 30 ಜೂನ್ 2024, 15:24 IST

ಕುರುಗೋಡು: ರೈತರಿಂದ ಒಣಮೆಣಸಿನಕಾಯಿ ಖರೀದಿಸಿ ಹಣ ಕೊಡದೆ ವಂಚಿಸಿದ ಘಟನೆ ತಾಲ್ಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

2023ರ ಮಾರ್ಚ್ ತಿಂಗಳಲ್ಲಿ ಗ್ರಾಮದ ಮಧ್ಯವರ್ತಿಗಳ ಮೂಲಕ ಅಗ್ರಿ ಗ್ರೀಡ್ ಸರ್ವೀಸ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ₹5.28 ಕೋಟಿ ಮೌಲ್ಯದ 2.40 ಲಕ್ಷ ಕೆಜಿ ಒಣಮೆಣಿಸಿನಕಾಯಿ ಖರೀದಿಸಿದ್ದರು. ಮೂರು ಕಂತುಗಳನ್ನು ₹3.35 ಕೋಟಿ ಹಣ ಪಾವತಿಸಿ ₹1.93 ಕೋಟಿ ಬಾಕಿ ಉಳಿಸಿಕೊಂಡಿದ್ದರು. ರೈತರು ಹಲವು ಬಾರಿ ಕೇಳಿದರೂ ಹಣ ಕೊಡದೆ ಸತಾಯಿಸುತ್ತಿದ್ದರು.

ರೈತರಿಂದ ಖರೀದಿಸಿದ ಒಣಮೆಣಸಿನಕಾಯಿಯನ್ನು ಬಳ್ಳಾರಿಯ ಶ್ರೀಶೈಲ ಕೋಲ್ಡ್ ಸ್ಟೋರೇಜ್‍ನಲ್ಲಿರಿಸಿ ಬ್ಯಾಂಕ್‍ನಲ್ಲಿ ಸಾಲಪಡೆದು ರೈತರಿಗೆ ಬಾಕಿ ಹಣ ಪಾವತಿಸಿದೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ.

ADVERTISEMENT

ಸೋಮಸಮುದ್ರ ಗ್ರಾಮದ ಮಧ್ಯವರ್ತಿಗಳಾದ ಅಂಗಡಿ ವಿರೂಪಾಕ್ಷಿ ಮತ್ತು ಈಡಿಗರ ರಾಮರೆಡ್ಡಿ, ಅಗ್ರಿ ಗ್ರೀಡ್ ಸರ್ವೀಸ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬೆಂಗಳೂರು ಮೂಲದ ಪತ್ನಿ ಆಶಾರಾಣಿ, ಪತಿ, ಎನ್.ಟಿ. ರಮೇಶ್ ಮತ್ತು ಸಹೋದರ ಹಿರಿಯೂರು ತಾಲ್ಲೂಕಿನ ಗಿಡ್ಡ ಓಬನಹಳ್ಳಿ ಗ್ರಾಮದ ಅಶೋಕ್ ಇವರ ಮೇಲೆ ಕ್ರಮಕೈಗೊಳ್ಳುವಂತೆ ಸೋಮಸಮುದ್ರ ಗ್ರಾಮದ ಶಿವಮೂರ್ತಿ ದೂರು ನೀಡಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.