ADVERTISEMENT

ಸಿರುಗುಪ್ಪ | ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ; ಅಧಿಕಾರಿಗಳು ತಬ್ಬಿಬ್ಬು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:33 IST
Last Updated 19 ಸೆಪ್ಟೆಂಬರ್ 2024, 15:33 IST
<div class="paragraphs"><p>ಸಿರುಗುಪ್ಪ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು</p></div>

ಸಿರುಗುಪ್ಪ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

   

ಸಿರುಗುಪ್ಪ: ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ನಡೆಯಿತು. ಕೆಲಕಾಲ ತಬ್ಬಿಬ್ಬುಗೊಂಡಂತೆ ಕಂಡುಬಂದ ಪೌರಾಯುಕ್ತ ಹಾಗೂ ಎಇಇ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು.

ಸಭೆಗೆ ಅಧಿಕಾರಿಗಳು ಹಿಂದಿನ ಸಭೆಯ ನಡವಳಿಗೆ ಒಪ್ಪಿಗೆ ನೀಡುವಂತೆ ಓದಿ ತಿಳಿಸಿದಾಗ, ಸದಸ್ಯರೆಲ್ಲರೂ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಸಭೆಯಲ್ಲಿ ಕೈಗೊಂಡ ನಡವಳಿ ಪ್ರತಿ ಕೊಡದ ಹೊರತು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

ಆರೋಗ್ಯ ನಿರೀಕ್ಷಕ ರಂಗಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಮಲ್ಲಿಕಾರ್ಜುನ,' ನಗರಸಭೆಯಲ್ಲಿ ಕೇವಲ 8 ಆಟೊ, ಒಂದು ಜೆಸಿಬಿ ಹಾಗೂ 3 ಟ್ರ್ಯಾಕ್ಟರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಡೀಸೆಲ್ ಖರ್ಚು 2 ವರ್ಷದಲ್ಲಿ ₹3.20 ಲಕ್ಷ ಎಂದು  ಬರೆದಿದ್ದು ಅವ್ಯವಹಾರದ ಶಂಕೆಯಿದೆ' ಎಂದು ಆರೋಪಿಸಿದರು.

ಇದಕ್ಕೆ ಸದಸ್ಯರಾದ ಚಿದಾನಂದ ರಾಯುಡು, ಮಹೇಶ ಗೌಡ, ಹನುಮಂತಪ್ಪ ದನಿಗೂಡಿಸಿದರು.

ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಪೌರಾಯುಕ್ತ ಎಚ್.ಎನ್ ಗುರುಪ್ರಸಾದ್ ನೀಡಿದರು.

‘ರಸ್ತೆ ಅತಿಕ್ರಮಣ ಅವ್ಯಾಹತವಾಗಿದ್ದು, ಕೆಲ ವರ್ತಕರು ಚರಂಡಿ ಮೇಲೆ ಮೆಟ್ಟಿಲು ಕಟ್ಟಿದ್ದಾರೆ ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯರು ದೂರಿದರು.

‘ಟೆಂಡರ್ ಕರೆಯದೆ ಸದಸ್ಯರಿಗೆ ಲ್ಯಾಪ್ ಟಾಪ್ ಹಾಗೂ ಮೋಟರ್ ಖರೀದಿ ಮಾಡಿದ್ದು ತಪ್ಪಲ್ಲವೆ’ ಎಂದು ಸದಸ್ಯ ದಮ್ಮೂರು ಮಂಜುನಾಥ ಪ್ರಶ್ನಿಸಿದರು.

ಕಸವಿಲೇವಾರಿ, ಚರಂಡಿ, ನೀರು ಸರಬರಾಜು ಅವ್ಯವಸ್ಥೆ ಕುರಿತು ಸದಸ್ಯರಾದ ಮೋದಿನ್, ನಾಗರಾಜ, ಮೆಹರುನ್ನೀಸ ಬೇಗಂ ಬೇಸರ ವ್ಯಕ್ತಪಡಿಸಿದರು.

'ಕೆರೆಯ ಹೂಳೆತ್ತುವ ಕಾಮಗಾರಿ ಬೇಸಿಗೆಯಲ್ಲಿ ಕೈಗೊಳ್ಳದೆ ಈಗ ನೀರು ತುಂಬಿದಾಗ ಹೇಗೆ ಕೈಗೊಳ್ಳುತ್ತೀರಿ' ಎಂದು ಎ ಇ ಇ ಗಂಗಾಧರ ಗೌಡ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ನಗರಸಭಾಧ್ಯಕ್ಷೆ ಸುಶೀಲಮ್ಮ, ಉಪಾದ್ಯಕ್ಷೆ ಯಶೋಧಾಮೂರ್ತಿ ಹಾಗೂ ನಾಮ ನಿರ್ದೇಶಿತ ಸದಸ್ಯರು ಹಾಜರಿದ್ದರು.

ಸಿರುಗುಪ್ಪ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ಪಕ್ಷಬೇಧ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.