ADVERTISEMENT

ಹೊಸಪೇಟೆ: ಕುಸ್ತಿಯಲ್ಲಿ ಗೆದ್ದರೆ ‘ಹಂಪಿ ಕೇಸರಿ ಬಿರುದು’

ಹಂಪಿ ಉತ್ಸವದಲ್ಲಿ ಕಲ್ಲುಗುಂಡು ಎತ್ತುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:56 IST
Last Updated 7 ಜನವರಿ 2020, 15:56 IST
ಹಂಪಿ ಉತ್ಸವದ ಪ್ರಯುಕ್ತ ಮರಳು ಶಿಲ್ಪಕಲಾ ಶಿಬಿರ ಹಮ್ಮಿಕೊಂಡಿದ್ದು, ಒಡಿಶಾ ಕಲಾವಿದ ಜಿತೇಂದ್ರ ಮಹಾರಾಣ ಅವರ ಕೈಯಲ್ಲಿ ಹಂಪಿ ಉಗ್ರ ನರಸಿಂಹ ಸ್ಮಾರಕ ಅರಳಿರುವುದು
ಹಂಪಿ ಉತ್ಸವದ ಪ್ರಯುಕ್ತ ಮರಳು ಶಿಲ್ಪಕಲಾ ಶಿಬಿರ ಹಮ್ಮಿಕೊಂಡಿದ್ದು, ಒಡಿಶಾ ಕಲಾವಿದ ಜಿತೇಂದ್ರ ಮಹಾರಾಣ ಅವರ ಕೈಯಲ್ಲಿ ಹಂಪಿ ಉಗ್ರ ನರಸಿಂಹ ಸ್ಮಾರಕ ಅರಳಿರುವುದು   

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಜ. 11ರಂದು ಕುಸ್ತಿ ಹಾಗೂ ಕಲ್ಲು ಗುಂಡು ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ.

74 ಕೆ.ಜಿ. ಗಿಂತ ಹೆಚ್ಚಿನ ತೂಕದ ರಾಜ್ಯ ಕುಸ್ತಿ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ₹35,000 ನಗದು, ‘ಹಂಪಿ ಕೇಸರಿ’ ಬಿರುದು ನೀಡಲಾಗುತ್ತದೆ. ₹20,000 ನಗದು ದ್ವಿತೀಯ, ₹10,000 ನಗದು ತೃತೀಯ ಬಹುಮಾನವಿದೆ.

57 ಕೆ.ಜಿ, 57ರಿಂದ 61 ಕೆ.ಜಿ., 61ರಿಂದ 65 ಕೆ.ಜಿ., 65ರಿಂದ 74 ಕೆ.ಜಿ. ವಿಭಾದಲ್ಲಿ ಗೆದ್ದವರಿಗೆ ₹20,000 ನಗದು ಪ್ರಥಮ, ₹10,000 ನಗದು ದ್ವಿತೀಯ ಹಾಗೂ ₹5,000 ನಗದು ತೃತೀಯ ಬಹುಮಾನ ಇದೆ.

ADVERTISEMENT

ರಾಜ್ಯ ಮಹಿಳೆಯರ ಕುಸ್ತಿ ಸ್ಪರ್ಧೆಯು 50ರಿಂದ 55 ಕೆ.ಜಿ, 55 ಕೆ.ಜಿ, 59 ಕೆ.ಜಿ.ಗಿಂತ ಹೆಚ್ಚಿನ ತೂಕದ ಸ್ಪರ್ಧೆ ಆಯೋಜಿಸಲಾಗಿದ್ದು, ₹20,000 ನಗದು ಪ್ರಥಮ, ₹10,000 ನಗದು ದ್ವಿತೀಯ, ₹5,000 ನಗದು ತೃತೀಯ ಬಹುಮಾನ ನಿಗದಿಪಡಿಸಲಾಗಿದೆ.

ಜಿಲ್ಲಾ ಪುರುಷರ ಕುಸ್ತಿ ಸ್ಪರ್ಧೆಯು 57ರಿಂದ 61ಕೆ.ಜಿ, 61 ರಿಂದ 65 ಕೆ,ಜಿ, 65ರಿಂದ 70 ಕೆ.ಜಿ, 70ರಿಂದ 74 ಕೆ.ಜಿ ವಿಭಾಗದಲ್ಲಿ ಗೆದ್ದವರಿಗೆ ₹20,000 ನಗದು ಪ್ರಥಮ, ₹10,000 ನಗದು ತೃತೀಯ ಹಾಗೂ ₹5,000 ನಗದು ತೃತೀಯ ಬಹುಮಾನ ಇದೆ.

ಪುರುಷರ ಕಲ್ಲುಗುಂಡು ಎತ್ತುವ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ ₹15,000 ನಗದು, ₹10,000 ನಗದು ದ್ವಿತೀಯ, ₹5,000 ನಗದು ತೃತೀಯ ಬಹುಮಾನ ಇಡಲಾಗಿದೆ.

ಜಿಲ್ಲಾಮಟ್ಟದ ಕುಸ್ತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. ಎಲ್ಲಾ ಸ್ಪರ್ಧಾಳುಗಳು ಆಧಾರ್‌ ಕಾರ್ಡ್‌ನೊಂದಿಗೆ ಪಾಲ್ಗೊಳ್ಳುವುದು ಕಡ್ಡಾಯ.

ಪ್ರಶಸ್ತಿ ಪತ್ರ: ಹಂಪಿ ಉತ್ಸವದ ನಿಮಿತ್ತ ಹಮ್ಮಿಕೊಂಡಿರುವ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ 18 ಜನರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.