ADVERTISEMENT

ಹರಪನಹಳ್ಳಿ | ಲೋಕ ಅದಾಲತ್: 1448 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:46 IST
Last Updated 13 ಜುಲೈ 2024, 15:46 IST
ಹರಪನಹಳ್ಳಿಯ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು
ಹರಪನಹಳ್ಳಿಯ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು    

ಹರಪನಹಳ್ಳಿ: ಇಲ್ಲಿಯ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ 1,448 ಪ್ರಕರಣಗಳು ಇತ್ಯರ್ಥಗೊಂಡವು.

ಹಿರಿಯ ಸಿವಿಲ್‌ ನ್ಯಾಯಧೀಶೆ ಆರ್. ಉಷಾರಾಣಿ ಅವರು, 786 ಪ್ರಕರಣ ಪೈಕಿ, ಒಟ್ಟು ₹ 72.15 ಲಕ್ಷ ಮೌಲ್ಯದ 682 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಕಿರಿಯ ನ್ಯಾಯಾಲಯದಲ್ಲಿ ಕಿರಿಯ ಸಿವಿಲ್‌ ನ್ಯಾಯಧೀಶ ಮನುಶರ್ಮಾ ಅವರು, 890 ಪ್ರಕರಣಗಳ ಪೈಕಿ ಒಟ್ಟು ₹35.35 ಲಕ್ಷ ಮೌಲ್ಯದ 766 ಪ್ರಕರಣಗಳನ್ನು ಪರಿಹರಿಸಿದರು.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ, ಒಟ್ಟಾಗಿ ಸಂಸಾರ ನಡೆಸಲು ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.