ADVERTISEMENT

ಬಳ್ಳಾರಿಯಲ್ಲಿ ಸತತ 4 ಗಂಟೆ ಮಳೆ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 4:10 IST
Last Updated 5 ಅಕ್ಟೋಬರ್ 2024, 4:10 IST
<div class="paragraphs"><p>ಮಳೆಯಿಂದಾಗಿ ನೀರು ನಿಂತಿರುವುದು</p></div>

ಮಳೆಯಿಂದಾಗಿ ನೀರು ನಿಂತಿರುವುದು

   

– ಪ್ರಜಾವಾಣಿ ಚಿತ್ರ

ಬಳ್ಳಾರಿ: ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.

ADVERTISEMENT

ರಾತ್ರಿ 11ರ ಸುಮಾರಿನಲ್ಲಿ ಆರಂಭವಾದ ಮಳೆ ಸತತ ನಾಲ್ಕು ಗಂಟೆ ಸುರಿಯಿತು. ಮಳೆಯಿಂದಾಗಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ರಾತ್ರಿಯಿಡೀ ಪರದಾಡುವಂತಾಯಿತು.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣ, ಹಳೇ ತಾಲ್ಲೂಕು ಕಚೇರಿ ಆವರಣ, ಶಾಲೆ, ಕಾಲೇಜುಗಳ ಮೈದಾನ ಕೆರೆಯಂತಾಗಿವೆ.

ಬಳ್ಳಾರಿ ನಗರದ ಕೊಳೆಗೇರಿಗಳಲ್ಲಿ ‌ಚರಂಡಿಗಳು ತುಂಬಿ, ಕೊಳಕು ನೀರು ಮನೆಗಳನ್ನು ಆವರಿಸಿದೆ. ನಿವಾಸಿಗಳು ನಿದ್ದೆಗೆಟ್ಟು ಚರಂಡಿ ನೀರನ್ನು ಮನೆಯಿಂದ ಹೊರಗೆ ಚೆಲ್ಲುವಂತಾಯಿತು.

ಜಿಲ್ಲಾ ಕ್ರೀಡಾಂಗಣ ರಸ್ತೆ ಹಾಗೂ ಸತ್ಯನಾರಾಯಣಪೇಟೆಯ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಾಹನ ಸವಾರರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಿದರು.

ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ದಿಡೀರ್ ಏರಿಕೆಯಾಗಿತ್ತು. ಆದರೆ ಈಗ ಸುರಿದಿರುವ ಮಳೆ ವಾತಾವರಣವನ್ನು ತಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.