ADVERTISEMENT

ಸಿರುಗುಪ್ಪ | ಧಾರಕಾರ ಮಳೆ: ಚರಂಡಿ ನೀರು ರಸ್ತೆಗೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:19 IST
Last Updated 13 ಜೂನ್ 2024, 14:19 IST
ಸಿರುಗುಪ್ಪ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸುರಿದ ಮಳೆಗೆ ಚರಂಡಿ ನೀರು ನಿಂತಿರುವುದು
ಸಿರುಗುಪ್ಪ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸುರಿದ ಮಳೆಗೆ ಚರಂಡಿ ನೀರು ನಿಂತಿರುವುದು   

ಸಿರುಗುಪ್ಪ: ನಗರದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ಚರಂಡಿಗಳಲ್ಲಿ ನೀರು ಉಕ್ಕಿ ಹರಿದು ರಸ್ತೆಯಲ್ಲಿ ತುಂಬಿಕೊಂಡಿತು. ಕೆಲವು ವಾರ್ಡ್‌ಗಳಲ್ಲಿ ದೊಡ್ಡ ಮೋರಿಗಳೂ ತುಂಬಿ ಕೊಳಕು ನೀರು ರಸ್ತೆ ಮೇಲೆ ಹರಿಯಿತು. ಸಂಚಾರ ಓಡಾಟಕ್ಕೆ ತೀವ್ರ ತೊಂದರೆ ಅನುಭವಿಸಿದ ಜನ ನಗರಸಭೆಗೆ ಹಿಡಿಶಾಪ ಹಾಕಿದರು.

ಮಧ್ಯಾಹ್ನ 2 ಗಂಟೆ ಬಳಿಕ ವಾತಾವರಣದಲ್ಲಿ ಏಕಾಏಕಿ ಬದಲಾವಣೆ ಕಂಡುಬಂತು. ಮೋಡಗಳು ದಟ್ಟವಾಗಿ ಆರಂಭಿಸಿದವು. ಅದೇ ವೇಳೆ ಜೋರಾದ ಗಾಳಿಯೂ ಬೀಸಿತು. ಸಂಜೆ 3 ಗಂಟೆ ದಾಟುತ್ತಲೇ ಗಾಳಿ, ಗುಡುಗು –ಸಿಡಿಲುಗಳು ಮಿಂಚಿನೊಂದಿಗೆ ಮಳೆ ಜೋರಾಗಿ ಸುರಿಯಲಾರಂಭಿಸಿತು.

ನೀರು ಸರಾಗವಾಗಿ ಹರಿಯದೇ ರಸ್ತೆ ಬದಿಯಲ್ಲಿರುವ ಅಂಗಡಿಗಳ ಮುಂದೆಯೂ ನಿಂತಿದ್ದ ಪರಿಣಾಮವಾಗಿ ವ್ಯಾಪಾರ –ವಹಿವಾಟಿಗೂ ತೊಂದರೆಯಾಗಿತ್ತು. ಪ್ರತಿ ಬಾರಿ ಮಳೆಗಾಲ ಸನ್ನಿವೇಶದಲ್ಲಿ  ನಿರ್ಮಾಣವಾಗುತ್ತಿದ್ದರೂ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನಿದೆ ಎಂದು ಕೆಲವು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.