ADVERTISEMENT

ಕಂಪ್ಲಿಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ, ಹಲವೆಡೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 3:26 IST
Last Updated 20 ಆಗಸ್ಟ್ 2024, 3:26 IST
<div class="paragraphs"><p>ಕಂಪ್ಲಿ ರಾಜ್ಯ ಹೆದ್ದಾರಿ-29 ಹಾನಿಯಾಗಿರುವುದು</p><p></p></div>

ಕಂಪ್ಲಿ ರಾಜ್ಯ ಹೆದ್ದಾರಿ-29 ಹಾನಿಯಾಗಿರುವುದು

   

ಕಂಪ್ಲಿ(ಬಳ್ಳಾರಿ): ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ತಡರಾತ್ರಿ ಉತ್ತಮ ಮಳೆಯಾಗಿದೆ.

ADVERTISEMENT

ರಾತ್ರಿಯಿಡೀ 8.14 ಸೆಂ.ಮೀ ಮಳೆ ಸುರಿದಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಬಹುತೇಕ ಹಳ್ಳಗಳು ತುಂಬಿಹರಿಯುತ್ತಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿವೆ.

ಜವುಕು-ಜೀರಿಗನೂರು ಮತ್ತು ಚಿನ್ನಾಪುರ-ಮೆಟ್ರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.

ರಾಜ್ಯ ಹೆದ್ದಾರಿ-29ರ ಮಾರೆಮ್ಮ ದೇವಸ್ಥಾನ ಬಳಿ ರಭಸದ ಮಳೆಗೆ ರಸ್ತೆ ಒಂದು ಭಾಗಕ್ಕೆ ಹಾನಿಯಾಗಿ ಸಂಚಾರ ವ್ಯತ್ಯಯವಾಗಿದೆ.

ತಾಲ್ಲೂಕಿನ ದೇವಲಾಪುರ ಉಡುವಿನ ಹಳ್ಳವು ಭರ್ತಿಯಾಗಿದ್ದು, ಗದ್ದೆಗಳು ಜಲಾವೃತವಾಗಿವೆ. ದೇವಲಾಪುರ ಗ್ರಾಮದ ರಾಜನ ಮಟ್ಟಿಯ ಚರಂಡಿ ಭರ್ತಿಯಾಗಿ ಗ್ರಾಮ ಪಂಚಾಯತಿ ಬಳಿಯ ಸುಮಾರು 20ಮನೆಗಳಿಗೆ ನೀರು ನುಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.