ADVERTISEMENT

ಹೊಸಪೇಟೆ: ಅಂಧ ಮಕ್ಕಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 7:21 IST
Last Updated 1 ನವೆಂಬರ್ 2021, 7:21 IST
ಹೊಸಪೇಟೆಯ ವಿಶ್ವಚೇತನ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಮಹಿಳಾ ಬೈಕರ್ಸ್ ತಂಡದವರು ಸ್ಟಿಕ್‌, ಬ್ರೈಲ್‌ ಲಿಪಿ ವಿತರಿಸಿದರು
ಹೊಸಪೇಟೆಯ ವಿಶ್ವಚೇತನ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಮಹಿಳಾ ಬೈಕರ್ಸ್ ತಂಡದವರು ಸ್ಟಿಕ್‌, ಬ್ರೈಲ್‌ ಲಿಪಿ ವಿತರಿಸಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ವಿಜಯನಗರ ಕಾಲೊನಿಯಲ್ಲಿರುವ ವಿಶ್ವಚೇತನ ಅಂಧಮಕ್ಕಳ ಶಾಲೆಗೆ ಬೆಂಗಳೂರಿನ ಮಹಿಳಾ ಬೈಕರ್ಸ್ ತಂಡ ನೆರವು ನೀಡಿದೆ.

ಬೆಂಗಳೂರಿನ ‘ಶಿ ಫಾರ್’ ಸೊಸೈಟಿ, ರೋಟರಿ ಇನ್ನರ್ ವೀಲ್, ಕೋವೆ ಕರ್ನಾಟಕ ಹಾಗೂ ಸ್ಪರ್ಶ ಸಂಸ್ಥೆಯ ಸದಸ್ಯರು ಶಾಲೆಯ ಅಂಧ ಮಕ್ಕಳಿಗೆ ಒಂದು ತಿಂಗಳ ಪಡಿತರ, ಬ್ರೈಲ್ ಲಿಪಿ ಸಾಧನ, ‌ಸ್ಟಿಕ್, ಕುರ್ಚಿ, ಪ್ರಿಂಟರ್ ಮತ್ತು ಹಾರ್ಮೋನಿಯಂ ವಿತರಿಸಿದರು.

ಮಹಿಳಾ ಬೈಕರ್ ಹರ್ಷಿಣಿ ವೆಂಕಟೇಶ್ ಮಾತನಾಡಿ, ‘ಸಮಾಜದ ವಿವಿಧ ಕ್ಷೇತ್ರದವರಿಗೆ ನೆರವು ನೀಡಲಾಗುತ್ತಿದೆ. ಈ ಸಲ ಇಲ್ಲಿಗೆ ಬಂದಿರುವುದರಿಂದ ಶಾಲೆಯ ಅಂಧ ಮಕ್ಕಳಿಗೆ ಸಹಾಯ ಮಾಡಲಾಗಿದೆ’ ಎಂದರು.

ADVERTISEMENT

ಗಾಯತ್ರಿ, ವಿಶ್ವಚೇತನ ಶಾಲೆಯ ಗಂಗಾಧರ ಗಡದ್, ಭೂಮಿಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.