ADVERTISEMENT

ಕಂಪ್ಲಿ: ಹಲಗೆ ಸದ್ದಿಗೆ ಯುವಕರ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:29 IST
Last Updated 26 ಮಾರ್ಚ್ 2024, 14:29 IST
ಕಂಪ್ಲಿಯಲ್ಲಿ ಯುವಕರ ತಂಡ ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು
ಕಂಪ್ಲಿಯಲ್ಲಿ ಯುವಕರ ತಂಡ ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು   

ಕಂಪ್ಲಿ: ಹೋಳಿ ಹಬ್ಬದ ಅಂಗವಾಗಿ ಸ್ಥಳೀಯ ಯುವಕರು, ಚಿಣ್ಣರು, ಮಹಿಳೆಯರು, ಯುವತಿಯರು ಪರಸ್ಪರ ಬಣ್ಣಹಚ್ಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಮಂಗಳವಾರ ಆಚರಿಸಿದರು.

ಪಟ್ಟಣದ ವಿವಿಧೆಡೆ ಯುವಕರ ತಂಡ ಬಿರು ಬಿಸಿಲನ್ನು ಲೆಕ್ಕಿಸದೆ ಹಲಗೆ ಶಬ್ಧಕ್ಕೆ ಹೆಜ್ಜೆ ಹಾಕಿದರು. ಇನ್ನು ಕೆಲವರು ಕುಣಿದು ಕುಪ್ಪಳಿಸಿದರು.


ಪೋಷಕರು ತಂದಿದ್ದ ನೈಸರ್ಗಿಕ ಬಣ್ಣಗಳನ್ನು ಬಳಸಿ ನೀರಿನಲ್ಲಿ ಮಿಶ್ರಣ ಮಾಡಿ ಬಳಿಕ ಪಿಚಕಾರಿ ಉಪಕರಣಕ್ಕೆ ತುಂಬಿ ಗೆಳೆಯರಿಗೆ ಎರಚುವ ಮೂಲಕ ಚಿಣ್ಣರು ಸಂಭ್ರಮಪಟ್ಟರು.

ADVERTISEMENT

ಕೆಲವರು ಅಣಕು ಶವಯಾತ್ರೆ ಮಾಡಿ ಗಮನಸೆಳೆದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುರು ಆಗಿರುವುದರಿಂದ ಪ್ರಸ್ತುತ ಹಬ್ಬದಿಂದ ಅವರು ಅಂತರ ಕಾಪಾಡಿಕೊಂಡಿರುವುದು ಕಂಡುಬಂತು.

ಬಣ್ಣದಲ್ಲಿ ಮಿಂದೆದ್ದವರು ಸಂಜೆಯಾಗುತ್ತಿದ್ದಂತೆ ಇಲ್ಲಿಯ ಕೋಟೆ ಪ್ರದೇಶ ಬಳಿಯ ತುಂಗಭದ್ರಾ ನದಿಗೆ ತೆರಳಿ ಸ್ನಾನ ಮಾಡಿ ಮರಳಿದರು.

ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ 10 ಕಡೆ ಕಾಮದೇವ ಮತ್ತು ರತಿದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮಾರ್ಚ್ 25ರ ಹೋಳಿ ಹುಣ್ಣಿಮೆಯಂದು ಸಂಜೆ ಕಾಮನ ಹಾಡನ್ನು ಹಾಡುತ್ತ ಮೆರವಣಿಗೆ ನಡೆಸಿ ಮಧ್ಯರಾತ್ರಿ ಕಾಮ ಮತ್ತು ರತಿಯರ ಚಿತ್ರಪಟವನ್ನು ದಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.