ADVERTISEMENT

ಅಪಮಾನಕ್ಕೆ ಪ್ರತಿಯಾಗಿ ಸನ್ಮಾನ ಸಿಗಲಿದೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 4:15 IST
Last Updated 21 ಮಾರ್ಚ್ 2024, 4:15 IST
ಬಳ್ಳಾರಿ ನಗರದಲ್ಲಿ ಬುಧವಾರ ನಡೆದ ಬೂತ್‌ ವಿಜಯ ಅಭಿಯಾನ ಸಭೆಯಲ್ಲಿ ಮಾತನಾಡುತ್ತಿರುವ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು.
ಬಳ್ಳಾರಿ ನಗರದಲ್ಲಿ ಬುಧವಾರ ನಡೆದ ಬೂತ್‌ ವಿಜಯ ಅಭಿಯಾನ ಸಭೆಯಲ್ಲಿ ಮಾತನಾಡುತ್ತಿರುವ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು.   

ಬಳ್ಳಾರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅಪಮಾನ ಆಗಿತ್ತು. ಈ ಬಾರಿ ಭಗವಂತ ಸನ್ಮಾನ ಮಾಡಲಿದ್ದಾನೆ. ಜನರ ಮೂಲಕ‌ ಸನ್ಮಾನ ಸಿಗಲಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‌‘ಬೂತ್ ವಿಜಯ ಅಭಿಯಾನ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ‌30 ವರ್ಷದ ರಾಜಕೀಯದಲ್ಲಿ ಸೋಲು ಗೆಲುವು ಕಂಡಿದ್ದೇನೆ‌. ದೇವರೇ ಎಲ್ಲ ಕೊಟ್ಟ. ಕಳೆದ ಚುನಾವಣೆಯಲ್ಲಿ ಸೋಲಾಯಿತು.‌ 10 ವರ್ಷ ನಾನು ಕ್ಷೇತ್ರದಿಂದ ದೂರವಿದ್ದೆ. ಆದರೂ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಿದ್ದರು. ಹೀಗಿದ್ದರೂ ನಾನು ಸೋಲಬೇಕಾಯಿತು. ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್‌ ನೀಡಿದೆ‘ ಎಂದರು. 

‘ಈ ಬಾರಿ ನರೇಂದ್ರ ಮೋದಿ ಗೆಲ್ಲಬೇಕು. ಬಳ್ಳಾರಿ ಜತೆಗೆ, ರಾಜ್ಯದ 28 ಕ್ಷೇತ್ರಗಳನ್ನೂ ಗೆದ್ದು ಮೋದಿಗೆ ಉಡುಗೊರೆ ನೀಡಬೇಕು. ದೇಶದಲ್ಲಿ ಬಿಜೆಪಿ 400 ಕ್ಷೇತ್ರ ಗೆಲ್ಲಬೇಕು. ನಮ್ಮ ವಿರೋಧಿಗಳು ಚುನಾವಣೆಯಲ್ಲಿ ಯಾವುದೇ ಲೆಕ್ಕಾಚಾರ ಹಾಕಿದರೂ ಅದು ನಡೆಯುವುದಿಲ್ಲ‌‘ ಎಂದು ಅವರು ಹೇಳಿದರು. 

ADVERTISEMENT

‘ಮೋದಿ ಹತ್ತು ವರ್ಷದಲ್ಲಿ ದೇಶದ ಪ್ರಗತಿ ಮಾಡಿದ್ದಾರೆ. 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದ್ದಾರೆ‘ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.